ಜಯನಗರ ಸ ಉ ಹಿ ಮಾ ಪ್ರಾ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುದ್ದಪ್ಪ ಧ್ವಜಾರೋಹಣ ನೆರವೇರಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಭಾಷಣ, ಹಾಡು,ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.ಈ ಸಂಧರ್ಭದಲ್ಲಿ ಶಾಲಾ ವತಿಯಿಂದ ಆಯೋಜಿಸಿದ್ದ ವಿವಿಧ ಆಟೋಟ ಸ್ಪರ್ಧೆ,ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.
ಜಯನಗರ ನಿವಾಸಿಯಾಗಿದ್ದು ಗೃಹರಕ್ಷಕ ದಳದ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಾ ತನ್ನ 42 ನೇ ವಯಸ್ಸಿನಲ್ಲಿ ದ್ವಿತೀಯ ಪಿ ಯು ಸಿ ಪರೀಕ್ಷೆ ಬರೆದು ಉತೀರ್ಣ ಗೊಂಡಿರುವ ಶ್ರೀಮತಿ ಗೀತಾ ರವರನ್ನು ದೃಷ್ಟಿ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಇದರ ಅಧ್ಯಕ್ಷರಾದ ಬಾಲಕೃಷ್ಣ ಭಟ್ ಕೋಡಂಕೇರಿ ಗೌರವಿಸಿ ಸನ್ಮಾನಿಸಿ 3 ಸಾವಿರ ರೂಪಾಯಿಗಳ ಚೆಕ್ ವಿತರಣೆ ಮಾಡಿದರು.
.
ವಿದ್ಯಾರ್ಥಿಗಳು,ಪೋಷಕರು, ಶಾಲಾ ಎಸ್ ಡಿ ಎಂ ಸಿ ಸದಸ್ಯರು ಹಾಗೂ ಹಳೆವಿದ್ಯಾರ್ಥಿಗಳು ಘೋಷಣೆ ಗಳೊಂದಿಗೆ ಜಯನಗರ ಪರಿಸರದಲ್ಲಿ ಮೆರವಣಿಗೆಯನ್ನು ನಡೆಸಿದರು.ಸಭಾ ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುದ್ದಪ್ಪ,ಉಪಾಧ್ಯಕ್ಷೆ ನಳಿನಿ, ಸ್ಥಳೀಯ ನ ಪಂ ಸದಸ್ಯ ಬಾಲಕೃಷ್ಣ ಭಟ್ ಕೊಡಂಕೇರಿ,
ಶಾಲಾ ಮುಖ್ಯೋಪಾಧ್ಯಾಯಿನಿ ವೀಣಾ ನಿವೃತ್ತ ಮುಖ್ಯೋಪಾಧ್ಯಾಯನಿ ಶ್ರೀಮತಿ ಅಂಬಾಬಾಯಿ,ಸ್ಥಳೀಯರಾದ ಮಂಜುನಾಥ್ ಬಳ್ಳಾರಿ, ಸ್ಥಳೀಯರಾದ ರೋ. ಸುರೇಶ್ ಕಾಮತ್, ಅಪರ್ಣ ಇಂಡಸ್ಟ್ರೀಸ್ ಮಾಲಕರು ಮೊದಲಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ವೀಣಾ ಸ್ವಾಗತಿಸಿ, ಶಿಕ್ಷಕಿ ಭಾರತಿ ಮತ್ತು ಅಶ್ವನಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.
ಶಿಕ್ಷಕರಾದ ನಳಿನಾಕ್ಷಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಶಿಕ್ಷಕ ವೃಂದದವರು ಸಹಕರಿಸಿದರು.