ವರ್ತಕರ ಸಂಘ ನಿಂತಿಕಲ್ಲು ಇದರ ವತಿಯಿಂದ ನಿಂತಿಕಲ್ಲು ಜಂಕ್ಷನ್ ನ
ಧರ್ಮಶ್ರೀ ಆರ್ಕೆಡ್ ಮುಂಭಾಗದಲ್ಲಿ ವಿಜೃಂಭಣೆಯ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.
ವೃದ್ಧಿ ಕಾಂಪ್ಲೆಕ್ಸ್ ನ ಮಾಲಕರೂ , ನಿವೃತ್ತ ಶಿಕ್ಷಕರು ಆಗಿರುವ ವೆಂಕಪ್ಪಗೌಡ ಆಲಾಜೆ ಧ್ವಜಾರೋಹಣವನ್ನು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕರಾದ ಸುಭಾಷ್ ಚಂದ್ರ ರೈ ತೋಟ, ಸೀತಾರಾಮಂಜನೇಯ ಸೇವಾ ಪ್ರತಿಷ್ಠಾನದ ಸಂಚಾಲಕರಾದ ರಘುನಾಥ್ ರೈ, ಸಾಯಿ ಪೆಟ್ರೋಲ್ ಬಂಕ್ ಮಾಲಕರಾದ ನವೀನ್ ಕುಮಾರ್, ಬೆಳ್ಳಾ ರೆ ರೋಟರಿ ಕ್ಲಬ್ ನ ಅಧ್ಯಕ್ಷ ಶಶಿಧರ ಮುಂತಾದವರು ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಿಂತಿಕಲ್ಲು ಪೇಟೆಯ ಎಲ್ಲಾ ಅಂಗಡಿಯ ಮಾಲಕರು ಮತ್ತು ಸಿಬ್ಬಂದಿ ವರ್ಗದ ವರು ಉಪಸ್ಥಿದ್ದರು.
ಕೆ ಎಸ್ ಗೌಡ ಸಮೂಹ ವಿದ್ಯಾಸಂಸ್ಥೆ, ವರ್ಷನಗರ ನಿಂತಿ ಕಲ್ಲು ಇಲ್ಲಿಯ ಶಾಲಾ ಅಭಿವೃದ್ಧಿ ಸಮಿತಿ,
ಮತ್ತು ಶಾಲಾ ಮೇಲುಸ್ತುವಾರಿ ಸಮಿತಿ ಹಾಗೂ ವಿದ್ಯಾರ್ಥಿಗಳು, ಸರಕಾರಿ ಪ್ರೌಢಶಾಲೆ ಎಣ್ಮೂರು ಇಲ್ಲಿಯ ಶಾಲಾ ಅಭಿವೃದ್ಧಿ ಸಮಿತಿ
ಮತ್ತು ಶಾಲಾ ಮೇಲುಸ್ತುವಾರಿ ಸಮಿತಿ ಹಾಗೂ ವಿದ್ಯಾರ್ಥಿಗಳು,
ದ.ಕ.ಜಿ. ಪ . ಹಿರಿಯ ಪ್ರಾಥಮಿಕ ಎಣ್ಮೂರು ಇಲ್ಲಿಯ ಶಾಲಾ ಅಭಿವೃದ್ಧಿ ಸಮಿತಿ ಮತ್ತು ಶಾಲಾ ಮೇಲುಸ್ತುವಾರಿ ಸಮಿತಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವರ್ತಕರ ಸಂಘದಿಂದ ಲಘು ಪಾನೀಯ, ಸಿಹಿ ತಿಂಡಿವಿತರಣೆ ಮಾಡಲಾಯಿತು. ಧರ್ಮಶ್ರೀ ಆರ್ಕೆಡ್ ನ
ಮಾಲಕರದ ಮಾಧವ ಗೌಡ ಕಾಮಧೇನು ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಿಂಪಲ್ ಸೇವಾ ಕೇಂದ್ರದ ಮಾಲಕರದ ಎನ್. ಟಿ . ವಸಂತ ನಿರೂಪಿಸಿ , ದೀಕ್ಷಿತ್ ಗೌಡ ಕಾಮಧೇನು ಸಹಕರಿಸಿದರು.