ಐವರ್ನಾಡು ಮುಹಿಯುದ್ದೀನ್ ಜುಮಾ ಮಸ್ಜಿದ್ ವಾರ್ಷಿಕ ಮಹಾಸಭೆ

0

ಅಧ್ಯಕ್ಷರಾಗಿ : ಶರಿಫ್ ನಿಡುಬೆ, ಕಾರ್ಯದರ್ಶಿ : ಅಬೂಬಕ್ಕರ್ ಪರ್ಲಿಕಜೆ

ಐವರ್ನಾಡು ಮುಹಿಯುದ್ದೀನ್ ಜುಮಾ ಮಸ್ಜಿದ್ ಇದರ ಮಹಾಸಭೆಯು ಆ.11 ರಂದು ಜುಮಾ ನಮಾಝ್ ಬಳಿಕ ನುಸ್ರತುಲ್ ಇಸ್ಲಾಂ ಮದ್ರಸ ಹಾಲ್ ನಲ್ಲಿ ನಡೆಯಿತು.ಖತೀಬ್ ಉಸ್ತಾದ್ ಅಬ್ದುಲ್ ಖಾದರ್ ಫೈಝಿ ಯವರ ದುವಾ ದೊಂದಿಗೆ ಸಭೆ ಪ್ರಾರಂಭಗೊಂಡಿತು. ವಕ್ಫ್ ಅಧಿಕಾರಿ ಮುಸ್ತಫಾ, ಇಕ್ಬಾಲ್ ಎಲಿಮಲೆ , ತಾಜ್ ಮುಹಮ್ಮದ್ ಸಂಪಾಜೆ, ಹಾಗೂ ಮೂಸಾ ಪೈಂಬಚ್ಚಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಕ್ಫ್ ಅಧಿಕಾರಿಗಳು ಕಾನೂನು ಮಾಹಿತಿ ನೀಡಿದರು. ನಂತರ ಇಕ್ಬಾಲ್ ಎಲಿಮಲೆ ,ತಾಜ್ ಮಹಮ್ಮದ್ ಸಂಪಾಜೆ ಹಾಗೂ ಮೂಸಾ ಪೈಂಬಚ್ಚಾಲ್ ರವರು ಮಾತನಾಡಿ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನಗಳನ್ನು ನೀಡಿದರು. ಬಳಿಕ ನಡೆದ ಸಭೆಯಲ್ಲಿ ನೂತನ ಕಮಿಟಿ ರಚಿಸಲಾಯಿತು. ಅಧ್ಯಕ್ಷರಾಗಿ ಶರೀಫ್ ನಿಡುಬೆ ,ಕಾರ್ಯದರ್ಶಿಯಾಗಿ ಅಬೂಬಕರ್ ಪರ್ಲಿಕಜೆ , ಉಪಾಧ್ಯಕ್ಷರಾಗಿ ಆದಂ ವಿ.ಕೆ, ಕೋಶಾಧಿಕಾರಿಯಾಗಿ ಅಬ್ದುಲ್ಲ ಪರ್ಲಿಕಜೆ ಹಾಗೂ ಸದಸ್ಯರಾಗಿ ಅಬೂಬಕ್ಕರ್ ಪಾಲೆಪ್ಪಾಡಿ ಇವರುಗಳನ್ನು ಸರ್ವಾನುಮದಿಂದ ಆರಿಸಲಾಯಿತು.ಸ್ವಲಾತ್ ನೊಂದಿಗೆ ಸಭೆ ಮುಕ್ತಾಯಗೊಂಡಿತು.