ನಿಷೇಧಿತ ಪ್ಲಾಸ್ಟಿಕ್ ‌ಮಾರಾಟ ವಾಹನ ತಡೆದ ನ.ಪಂ. – ಪ್ಲಾಸ್ಟಿಕ್ ವಶ

0

ನಿಷೇಧಿತ ಪ್ಲಾಸ್ಟಿಕ್ ‌ಮಾರಾಟ ಮಾಡುವ ವಾಹನವನ್ನು ನ.ಪಂ. ಅಧಿಕಾರಿಗಳು ತಡೆದು ಪ್ಲಾಸ್ಟಿಕ್ ವಶ ಪಡಿಸಿಕೊಂಡಿರುವ ಘಟನೆ ವರದಿಯಾಗಿದೆ.

ಕೆ.ಎ. 19 ಎಂ.ಸಿ. 5851 ಓಮ್ನಿ ವಾಹನದಲ್ಲಿ ಮಂಗಳೂರಿನಿಂದ ನಿಷೇಧಿತ ಪ್ಲಾಸ್ಟಿಕ್ ತಂದು ಸುಳ್ಯ ಕುರುಂಜಿಭಾಗ್ ನಲ್ಲಿ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಪಡೆದ ನ.ಪಂ. ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕರು, ಕುರುಂಜಿಭಾಗ್ ಗೆ ಹೋಗಿ ಧೃಡಪಡಿಸಿಕೊಂಡು ನ.ಪಂ. ಅಧಿಕಾರಿ ಗಳಿಗೆ ಮಾಹಿತಿ ನೀಡಿದರು.

ತಕ್ಷಣ ನ.ಪಂ ಸಿಬ್ಬಂದಿಗಳು ಸ್ಥಳಕ್ಕೆ ಬಂದರು. ವಿನಯ ಕುಮಾರ್ ಕಂದಡ್ಕ, ನ.ಪಂ. ಸಿಬ್ಬಂದಿಗಳಿದ್ದು‌ ಪ್ಲಾಸ್ಟಿಕ್ ವಶ ಪಡಿಸಿಕೊಂಡರು.