ಅಧ್ಯಕ್ಷರಾಗಿ ವಿಶ್ವನಾಥ ನಡು ತೋಟ, ಕಾರ್ಯದರ್ಶಿಯಾಗಿ ರತ್ನಾಕರ್
ಕರ್ನಾಟಕ ಸರಕಾರದ ಜಿಲ್ಲಾ ನೊಂದನಾಧಿಕಾರಿಯವರಿಂದ ನೋಂದಾವಣೆಗೊಂಡು ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ರಿ.ನೂತನವಾಗಿ ಅಸ್ತಿತ್ವಕ್ಕೆ ಬಂದಿದೆ.
ಈ ಹಿಂದೆ ಕಾರ್ಯನಿರತ ಪತ್ರಕರ್ತರ ಸಂಘ ಎಂಬ ಹೆಸರಿನಲ್ಲಿ ಅಸ್ತಿತ್ವದಲ್ಲಿದ್ದ ಸಂಘವು ಪುನರ್ ರಚನೆಯಾಗಿದ್ದು ಇನ್ನು ಮುಂದೆ ಪ್ರೆಸ್ ಕ್ಲಬ್ ರಿ. ಸುಬ್ರಹ್ಮಣ್ಯ ಎಂಬ ಹೆಸರಿನಲ್ಲಿ ಕಾರ್ಯಾಚರಿಸಲಿದೆ.
ಪ್ರೆಸ್ ಕ್ಲಬ್ ನ ಪದಾಧಿಕಾರಿಗಳಾಗಿ ಮುಂದಿನ ಒಂದು ವರ್ಷದ ಅವದಿಗೆ ಈ ಹಿಂದಿನ ಕಾರ್ಯನಿರತ ಪತ್ರಕರ್ತರ ಪದಾಧಿಕಾರಿಗಳನ್ನೆ ಮುಂದುವರೆಸುವುದಾಗಿ ಆ.19 ರಂದು ವಿಷ್ಣು ವೈಭವ ಹೊಟೇಲ್ ನ ಸಭಾಂಗಣದಲ್ಲಿ ನಡೆದ ಪ್ರೆಸ್ ಕ್ಲಬ್ ನ ಮೊದಲ ಸಭೆಯಲ್ಲಿ ನಿರ್ಧರಿಸಲಾಯಿತು.
ಅಧ್ಯಕ್ಷರಾಗಿ ಸಂಯುಕ್ತ ಕರ್ನಾಟಕ ಪತ್ರಿಕೆಯ ವಿಶ್ವನಾಥ ನಡುತೋಟ, ಕಾರ್ಯದರ್ಶಿಯಾಗಿ ವಿಜಯ ಕರ್ನಾಟಕ /ಹೊಸ ದಿಗಂತ ಪತ್ರಿಕೆಯ ರತ್ನಾಕರ ಸುಬ್ರಹ್ಮಣ್ಯ ಮುಂದುವರೆಯಲಿದ್ದಾರೆ. ಉಪಾಧ್ಯಕ್ಷರಾಗಿ ಪ್ರಜಾವಾಣಿ ಪತ್ರಿಕೆಯ ಲೋಕೇಶ್ ಬಿ ಎನ್, ಕೋಶಾಧಿಕಾರಿಯಾಗಿ ವಿಜಯ ಕರ್ನಾಟಕ/ ಕನ್ನಡ ಪ್ರಭ ಪತ್ರಿಕೆಯ ಪ್ರಕಾಶ್ ಸುಬ್ರಹ್ಮಣ್ಯ ಇರಲಿದ್ದಾರೆ. ನಿರ್ದೇಶಕರುಗಳಾಗಿ ಉದಯವಾಣಿ ಪತ್ರಿಕೆಯ ದಯಾನಂದ ಕಲ್ನಾರ್ ,ಸುದ್ದಿ ಬಿಡುಗಡೆ ಪತ್ರಿಕೆಯ ಶಿವರಾಮ ಕಜೆ ಮೂಲೆ , ಚಾನೆಲ್ 9 ನ ಶಿವ ಭಟ್ , ವಿಶ್ವವಾಣಿ/ ದಿಗ್ವಿಜಯದ ಸಂತೋಷ್ ಸುಬ್ರಹ್ಮಣ್ಯ, ಸ್ಪೀಡ್ ನ್ಯೂಸ್ ನ ನಾಗೇಶ್ ಮಡಿವಾಳ, ಕಹಳೆ ನ್ಯೂಸ್ ನ ಸುಪ್ರೀತ್ ಗೌಡ ಇರಲಿದ್ದಾರೆ.