ಕಲ್ಮಡ್ಕ ಗ್ರಾಮ ಪಂಚಾಯತಿನ ಸಾಮಾನ್ಯ ಸಭೆ

0

ಕಲ್ಮಡ್ಕ ಗ್ರಾಮ ಪಂಚಾಯತಿನಲ್ಲಿ ಆ.:23 ರಂದು ಗ್ರಾಮ ಪಂಚಾಯತಿನ ನೂತನ ಅಧ್ಯಕ್ಷರಾದ ಶ್ರೀ ಮಹೇಶ್ ಕುಮಾರ್ ಕೆ.‌ಎಸ್ ಅಧ್ಯಕ್ಷತೆಯಲ್ಲಿ ನಡೆಯಿತು.

2023-24 ನೇ ಸಾಲಿನ ಕ್ರಿಯಾಯೋಜನೆಯ ಬಗ್ಗೆ ಮತ್ತು ಸಾರ್ವಜಿನಿಕರ ಅರ್ಜಿಗಳ ಬಗ್ಗೆ ಚರ್ಚಿಸಲಾಯಿತು, ಸ್ಥಾಯಿ ಸಮಿತಿ, ನ್ಯಾಯ ಸಮಿತಿ ಇತರೆ ಸಮಿತಿಗಳನ್ನು ರಚನೆ ಮಾಡಲಾಯಿತು, ಗ್ರಾಮ ಪಂಚಾಯತಿನ ಸ್ಮಶಾನ ಕಾರ್ಯಚರಣೆಯನ್ನು ವ್ಯವಸ್ಥಿತ ರೀತಿಯಾಗಿ ಮಾಡುವುದರ ಬಗ್ಗೆ ಚರ್ಚಿಸಲಾಯಿತು.

ಸಾಮಾನ್ಯ ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮೋಹಿನಿ ಎಂ, ಸದಸ್ಯರುಗಳಾದ ಲೋಕೇಶ್ ಆಕ್ರಿಕಟ್ಟೆ, ಹಾಜಿರಾ ಗಫೂರ್, ಲೋಕಯ್ಯ ನಾಯ್ಕ, ಹರೀಶ್ ಎಂ, ಪವಿತ್ರ ಕುದ್ವ, ಮೀನಾಕ್ಷಿ ಕೆ, ಜಯಲತ ಕೆ.ಡಿ, ಗ್ರಾಮ ಪಂಚಾಯತಿನ ಅಭಿವೃದ್ಧಿ ಅಧಿಕಾರಿ ಕೀರ್ತಿಪ್ರಸಾದ್ ಸಿ.ಎಂ, ಕಾರ್ಯದರ್ಶಿ ಗೋಪಾಲಕೃಷ್ಣ ಕೆ ಉಪಸ್ಥಿತರಿದ್ದರು.