ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಯನ್ನು ಭೇಟಿ ಮಾಡಿ ಗ್ರಾಮದ ಸಮಸ್ಯೆ ಬಗ್ಗೆ ತಿಳಿಸಿದ ಸಂಪಾಜೆ ಗ್ರಾಮ ಪಂಚಾಯತ್ ನಿಯೋಗವೂ ಗ್ರಾಮದ ಮೂಲಭೂತ ಸಮಸ್ಯೆ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಪಘಾತವಾಗಿ ಗ್ರಾಮ ಆಡಳಿತ ವ್ಯವಸ್ಥೆಗೆ ತೊಂದರೆ, ಖಾತೆ ಬದಲಾವಣೆಯಿಂದ ತೊಂದರೆಯಾಗಿದ್ದು,
ಈ ವಿಚಾರದ ಕುರಿತು ಕೂಡಲೇ ಬದಲಿ ವ್ಯವಸ್ಥೆ ಕಲ್ಪಿಸಿಕೊಡುವಂತೆ ವಿನಂತಿಸಿಕೊಂಡರು. ಗ್ರಾಮ ಪಂಚಾಯತ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದು ಹೋಗುತ್ತಿದ್ದು ಪಾರ್ಕಿಂಗ್, ಮಾರುಕಟ್ಟೆ, ಒಳಚರಂಡಿ ವ್ಯವಸ್ಥೆ ಹಾಗೂ ಘನ ತ್ಯಾಜ್ಯ ವ್ಯವಸ್ಥೆಗೆ ಸ್ಥಳದ ಅಭಾವ. ಸರಕಾರಿ ಜಾಗದ ಅಲಭ್ಯತೆ ಬಗ್ಗೆ ಸಿ. ಓ. ಆನಂದ್ ರವರ ಗಮನಕ್ಕೆ ತರಲಾಯಿತು.
ನಿಯೋಗದಲ್ಲಿ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು, ಉಪಾಧ್ಯಕ್ಷರಾದ ಎಸ್. ಕೆ. ಹನೀಫ್ ಮಾಜಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಜಗದೀಶ್ ರೈ ವಿಮಲಾಪ್ರಸಾದ್, ಅನುಪಮಾ ಉಪಸ್ಥಿತರಿದ್ದರು. ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಸಿ. ಓ ಆನಂದ್ ಭರವಸೆ ನೀಡಿದರು.