ಕಟ್ಟಡ ಕಾರ್ಮಿಕರ ಮಕ್ಕಳ ಶಿಶುಪಾಲನ ಕೇಂದ್ರವನ್ನು ಮುಚ್ಚಲು ರಾಜ್ಯ ಘಟಕದಿಂದ ಜಿಲ್ಲಾ ಮತ್ತು ತಾಲೂಕು ಘಟಕಗಳಿಗೆ ಸೂಚನೆ

0

ಸುಳ್ಯದಲ್ಲಿ ಕಾರ್ಯಾಚರಿಸುತ್ತಿರುವ ಶಿಶುಪಾಲನ ಕೇಂದ್ರವನ್ನು ಆಗಸ್ಟ್ 28ರಿಂದ ಮುಚ್ಚುವಂತೆ ಆದೇಶ

ಕಳೆದ ಎರಡು ವರ್ಷಗಳ ಹಿಂದೆ ಕಾರ್ಮಿಕ ಇಲಾಖೆ
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಅಂಗನವಾಡಿ ಪ್ರಾರಂಭಿಸಲು ಯೋಜನೆ ರೂಪಿಸಿ ಅದರಂತೆ ಯೋಜನೆಗೆ CRECHE ಎಂಬ ಹೆಸರನ್ನು ನೀಡಿ ಶಿಶು ಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು.

ಆದರೆ ಇದೀಗ ಸರ್ಕಾರ ಈ ಯೋಜನೆಯನ್ನು ನಿಲ್ಲಿಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದ್ದು ಈ ಹಿನ್ನಲೆಯಲ್ಲಿ ಈ ಸಂಸ್ಥೆಯ ಬೆಂಗಳೂರು ಕೇಂದ್ರ ಘಟಕದಿಂದ ಸುಳ್ಯದ ಗುರುಂಪುವಿನಲ್ಲಿ ಕಾರ್ಯಚರಿಸುತ್ತಿರುವ ಶಿಶುಪಾಲನಾ ಕೇಂದ್ರಕ್ಕೆ ಶಿಶುಪಾಲನ ಕೇಂದ್ರವನ್ನು ಆಗಸ್ಟ್ 28ರಿಂದ ಮುಚ್ಚುವಂತೆ ಸೂಚನೆ ಬಂದಿರುತ್ತದೆ.

ಸೂಚನೆ ಬಂದಿರುವ ಪತ್ರದಲ್ಲಿ ‘ ಆಗಸ್ಟ್ 22ರಂದು ಕಾರ್ಮಿಕ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಭಾರತಿ,ಜಂಟಿ ಕಾರ್ಯದರ್ಶಿ,ಉಪ ಕಾರ್ಯದರ್ಶಿ ಇವರುಗಳ ನೇತೃತ್ವದ ಸಭೆ ನಡೆದಿದ್ದು ಈ ಸಂದರ್ಭದಲ್ಲಿ ಪ್ರತಿ ತಾಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ವಿಹಾರಗಳು ಇರುವ ಕಾರಣ ಈ ರೀತಿಯ ಶಿಶುಪಾಲನ ಕೇಂದ್ರದವನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದು ಆದ್ದರಿಂದ ಸಭೆಯಲ್ಲಿ ಆಗಸ್ಟ್ 31ರ ಒಳಗೆ ಎಲ್ಲಾ ಸರ್ಕಲ್ ಅನ್ನು ಮುಚ್ಚಲು ಇಲಾಖೆ ನಮಗೆ ಸೂಚಿಸಿದೆ.


ಆದ್ದರಿಂದ ಇಲಾಖೆಯ ಈ ಆದೇಶವನ್ನು ಪರಿಗಣಿಸಿ ನಮ್ಮ ಎಲ್ಲಾ ಕೇಂದ್ರಗಳನ್ನು ಮುಚ್ಚಲು ತೀರ್ಮಾನಿಸಿದ್ದೇವೆ ಎಂದು ಉಲ್ಲೇಖಿಸಲಾಗಿದೆ.

ರಾಜ್ಯ ಘಟಕದಿಂದ ಈ ರೀತಿಯ ಆದೇಶ ಬಂದಿರುವ ಹಿನ್ನೆಲೆಯಲ್ಲಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳು ತಬ್ಬಿಬಾಗಿದ್ದು ಶಿಶುಪಾಲನ ಕೇಂದ್ರವನ್ನು ಮುಚ್ಚುವುದರಿಂದ ಮಕ್ಕಳಿಗೆ ನಾನ ರೀತಿಯ ಸಮಸ್ಯೆಗಳು ಎದುರಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಷಯದ ಕುರಿತು ಸುದ್ದಿಯೊಂದಿಗೆ ಮಾತನಾಡಿರುವ ಶಿಶುಪಾಲನಾ ಕೇಂದ್ರದ ದಕ್ಷಿಣ ಕನ್ನಡ ಜಿಲ್ಲಾ ಕೋರ್ಡಿನೇಟರ್ ಕೀರ್ತಿ ರಂಜಿತ್ ಪೂಜಾರಿಯವರು ‘ ಏಕಾಏಕಿ ರಾಜ್ಯ ಘಟಕದಿಂದ ಈ ರೀತಿಯ ಆದೇಶ ಬಂದಿರುವುದು ತುಂಬಾ ಬೇಸರ ತಂದಿದೆ.ಸುಳ್ಯದ ಶಿಶುಪಾಲನ ಕೇಂದ್ರದಲ್ಲಿ ಸುಳ್ಯ ನಗರ ವ್ಯಾಪ್ತಿಯ ಬೇರೆ ಬೇರೆ ಕಡೆಗಳ ಕಟ್ಟಡ ಕಾರ್ಮಿಕರ ಸುಮಾರು 30ಕ್ಕೂ ಹೆಚ್ಚು ಪುಟಾಣಿ ಮಕ್ಕಳು ಕಲಿಯುತ್ತಿದ್ದು,ಈ ರೀತಿ ಪಾಲನಾ ಕೇಂದ್ರಗಳನ್ನು ಮುಚ್ಚುವುದರಿಂದ ಇಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರಿಗೆ ಮತ್ತು ಸಿಬ್ಬಂದಿಗಳಿಗೆ ಅಲ್ಲದೆ ಪುಟಾಣಿ ಮಕ್ಕಳಿಗೆ ತುಂಬಾ ಸಮಸ್ಯೆ ಎದುರಾಗುತ್ತದೆ ಎಂದು ಹೇಳಿದ್ದಾರೆ.
ಪೋಷಕರು ಮಕ್ಕಳನ್ನು ಪುನಃ ಬೇರೆ ಬೇರೆ ಅಂಗನವಾಡಿಗಳಿಗೆ ಸೇರಿಸಬೇಕಾಗುತ್ತದೆ.ಅಲ್ಲದೆ ಕೆಲಸ ಮಾಡುತ್ತಿದ್ದ ಟೀಚರ್ಸ್ ಮತ್ತು ಹೆಲ್ಪರ್ ಗಳ ಗತಿ ಏನು.ಅವರೆಲ್ಲ ಈ ಹುದ್ದೆಯನ್ನು ನಂಬಿದ್ದು ಕೆಲಸ ಕೈ ಬಿಟ್ಟು ಹೋದಲ್ಲಿ ಅವರ ಗತಿ ಏನು ಎಂಬ ಪರಿಸ್ಥಿತಿಗೆ ಮುಟ್ಟಿದ್ದಾರೆ. ಆದ್ದರಿಂದ ಸರ್ಕಾರ ಈ ಕಾರ್ಯಕರ್ತೆಯರನ್ನು ಸಮಸ್ಯೆಗೆ ತಳ್ಳದೆ ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಯೋಚಿಸ ಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.