.
ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ 2023-24 ನೇ ಸಾಲಿನ ಇಂಟರಾಕ್ಟ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆ.24ರಂದು ನಡೆಯಿತು. ರೋಟರಿ ಕ್ಲಬ್ ಸುಳ್ಯ ಇದರ ಅಧ್ಯಕ್ಷರಾದ ಆನಂದ ಖಂಡಿಗ ರವರು ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಭಾವನಾ ಕೆ. ಇವಳಿಗೆ ಗ್ಯಾವಲ್ ನ್ನು ಹಸ್ತಾಂತರಿಸುವ ಮೂಲಕ ಅಧಿಕಾರ ವಹಿಸಿದರು. ನಂತರ ಮಾಸ ಇವರು ” ವಿದ್ಯಾರ್ಥಿಗಳು ಇಂಟರಾಕ್ಟ್ ಕ್ಲಬ್ ನಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸೇವಾ ಮನೋಭಾವವನ್ನು ಬೆಳೆಸಿಕೊಂಡು, ತಮ್ಮ ವ್ಯಕ್ತಿತ್ವವನ್ನು ತಾವೇ ರೂಪಿಸಿಕೊಳ್ಳಬೇಕು”ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪ್ರಾಸ್ತಾವಿಕ ಮಾತುಗಳನ್ನಾಡಿದ ಸುಳ್ಯ ರೋಟರಿ ಕ್ಲಬ್ ನ ಇಂಟರಾಕ್ಟ್ ಚಯರ್ ಮೆನ್ ಚಂದ್ರಶೇಖರ ಪೇರಾಲು ಇವರು “ರೋಟರಿ ಸಂಸ್ಥೆ ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು,ಇದರ ಸಹ ಸಂಸ್ಥೆಯಾದ ಇಂಟರಾಕ್ಟ್ ಕ್ಲಬ್ 12 ರಿಂದ 18 ವರ್ಷದ ವಿದ್ಯಾರ್ಥಿಗಳಲ್ಲಿ ನಾಯಕತ್ವ, ಕೌಶಲ್ಯ ಅಭಿವೃದ್ಧಿ ಮತ್ತು ಸ್ವಯಂಸೇವಾ ಮನೋಭಾವವನ್ನು ಬೆಳೆಸುವುದರೊಂದಿಗೆ, ತಮ್ಮನ್ನು ಸಮಾಜದ ಭಾಗವಾಗಿ ಮತ್ತು ಶಕ್ತಿಯಾಗಿ ಬೆಳೆಸುತ್ತದೆ” ಎಂದರು. ವೇದಿಕೆಯಲ್ಲಿ ಮಾಸ ಕಾರ್ಯದರ್ಶಿ ಕಸ್ತೂರಿಶಂಕರ್ ಉಪಸ್ಥಿತರಿದ್ದು ಶುಭಹಾರೈಸಿದರು. ಇಂಟರಾಕ್ಟ್ ಕ್ಲಬ್ ನ ನಿರ್ದೇಶಕರಾದ ಸಂಧ್ಯಾ ಕೆ. ಇವರು ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು., ಕ್ಲಬ್ ನ ಶಿಕ್ಷಕ ಸಮನ್ವಯಾಧಿಕಾರಿಗಳಾದ ವಸಂತ ನಾಯಕ್ ಡಿ. ಇವರು ಸ್ವಾಗತಿಸಿ, ಶಿಕ್ಷಕರಾದ ಸುಂದರ ಕೆ ಧನ್ಯವಾದ ಅರ್ಪಿಸಿದರು. ಮುರಳೀಧರ ಪುನುಕುಟ್ಟಿ ಕಾರ್ಯಕ್ರಮ ನಿರೂಪಿಸಿದರು .
ಇಂಟರಾಕ್ಟ್ ಕ್ಲಬ್ ಅಧ್ಯಕ್ಷರಾಗಿ ಭಾವನಾ ಕೆ, ಕಾರ್ಯದರ್ಶಿಯಾಗಿ ಪೂಜಾಶ್ರೀಎಂ ಡಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚೇತನ್ ಪ್ರಭು ಕೆ, ಭೂಮಿಕಾ ಕೆ, ಜಗತ್ ಪಿ ಎಲ್, ಗೀತೇಶ್ ಪಿ ಎಸ್, ರೋಶನ್ ಕೆ, ರಕ್ಷಿತಾ ಪಿ ಎಲ್, ಕೀರ್ತನಾ ಡಿ, ನಿಕ್ಷಿತಾ ಎಂ ಡಿ. ಅಧಿಕಾರ ವಹಿಸಿಕೊಂಡರು.