ದ.ಕ. ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಸ್ವರ್ಣ ಸಂಭ್ರಮದ ಪ್ರಯುಕ್ತ ಕ್ರಿಕೆಟ್ ಪಂದ್ಯಾಟ

0

ಸುಳ್ಯದ ಪಯಸ್ವಿ‌ನಿ ಟೂರಿಸ್ಟ್ ಚಾಲಕ ಮಾಲಕ ಸಂಘಕ್ಕೆ ರನ್ನರಫ್ ಪ್ರಶಸ್ತಿ

ದ.ಕ. ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ ನ ಸ್ವರ್ಣಸಂಭ್ರಮದ ಪ್ರಯುಕ್ತ ಮಂಗಳೂರಿನಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಸುಳ್ಯದ ಪಯಸ್ವಿನಿ ಟೂರಿಸ್ಟ್ ಚಾಲಕ ಮಾಲಕ ಸಂಘ ಮತ್ತು ನೆಟ್ಟಣ ರೈಲ್ವೆ ಪಾರ್ಕಿಂಗ್ ಸದಸ್ಯರು ಜಂಟಿಯಾಗಿ ಭಾಗವಹಿಸಿ ದ್ವಿತೀಯ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಕ್ರಿಕೆಟ್ ಪಂದ್ಯಾಕೂಟದಲ್ಲಿ ಸುಳ್ಯದ ಪಯಸ್ವಿನಿ ಟೂರಿಸ್ಟ್ ಚಾಲಕ ಮಾಲಕ ಸಂಘದ 4 ಮಂದಿ ಸದಸ್ಯರುಗಳಾದ ರಾಕೇಶ್ ಕ್ರಾಸ್ತ, ದಾಮೋದರ ಅಡ್ಕಾರು, ರಾಜೇಶ್ ಅಡ್ಕಾರು, ರವಿರಾಜ ಅಡ್ಕಾರು ಪ್ರತಿನಿಧಿಸಿದ್ದರು.
ಪಯಸ್ವಿನಿ ಟೂರಿಸ್ಟ್ ತಂಡದ ರಾಕೇಶ್ ಕ್ರಾಸ್ತಾ ಬೆಸ್ಟ್ ಬ್ಯಾಟ್ಸ್ ಮ್ಯಾನ್ ಪ್ರಶಸ್ತಿಯ‌ನ್ನು ಪಡೆದುಕೊಂಡಿದ್ದಾರೆ.