ಪಂಜ ಗಣೇಶೋತ್ಸವ ರಜತ ಸಂಭ್ರಮ

0


🔸ಬಳ್ಪದಲ್ಲಿ ಸುಮಾರು 800 ಮನೆಗಳಿಗೆ ಏಕಕಾಲದಲ್ಲಿ ಆಮಂತ್ರಣ ಪತ್ರ

ಪಂಜದಲ್ಲಿ ಜರುಗಲಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ರಜತ ಸಂಭ್ರಮ 2023 ರ ಪ್ರಯುಕ್ತ ಆ.27 ರಂದು ಬಳ್ಪ ಗ್ರಾಮದ ಪ್ರತಿ ಮನೆಯನ್ನು ಸಂಪರ್ಕಿಸಿಸುವ ಉದ್ದೇಶದಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ
45 ಸದಸ್ಯರು 21 ತಂಡಗಳಾಗಿ ಪಾಲ್ಗೊಂಡು ಸುಮಾರು 800 ಮನೆಗಳಿಗೆ ಏಕಕಾಲದಲ್ಲಿ ಆಮಂತ್ರಣ ಪತ್ರವನ್ನು ನೀಡಲಾಯಿತು.


ಬಳ್ಪ ಗಾಮದ ಸಂಚಾಲಕ ಪ್ರಶಾಂತ್ ಎಣ್ಣೆಮಜಲು ರವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತು.

ಉತ್ಸವ ಸಮಿತಿ ಅಧ್ಯಕ್ಷರ ಸವಿತಾರ ಮುಡೂರು, ಕಾರ್ಯದರ್ಶಿ ಪವನ್ ಪಲ್ಲತ್ತಡ್ಕ, ಖಜಾಂಜಿ ಸುಬ್ಬಪ್ಪ ಕಲ್ಲುಗುಂಡಿ, ಆರ್ಥಿಕ ಸಮಿತಿ ಸಂಚಾಲಕ ಪುರುಷೋತ್ತಮ ದಂಬೆಕೋಡಿ, ಆರಾಧನಾ ಸಮಿತಿ ಅಧ್ಯಕ್ಷ ಚಿನ್ನಪ್ಪ ಸಂಕಡ್ಕ ಮೊದಲಾದವರು ಪಾಲ್ಗೊಂಡಿದ್ದರು.