ಆ.30 ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ

0

ಪ್ರತೀ ಪಂಚಾಯತಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳ ಸಮಾವೇಶ

ನ.ಪಂ. ಮತ್ತು ಪ್ರತೀ ಗ್ರಾ.ಪಂ.ಗಳಲ್ಲಿ ನೇರಪ್ರಸಾರ

ರಾಜ್ಯದಲ್ಲಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಗೃಹಲಕ್ಷ್ಮಿ’ ಯೋಜನೆಗೆ ಆ.೩೦ರಂದು ಮೈಸೂರಿನಲ್ಲಿ ಚಾಲನೆ ದೊರೆಯಲಿದ್ದು, ಅಂದು ರಾಜ್ಯದ ಒಂದು ಕೋಟಿಗೂ ಅಧಿಕ ಮಹಿಳೆಯರ ಬ್ಯಾಂಕ್ ಖಾತೆಗೆ ರಾಜ್ಯ ಸರಕಾರದಿಂದ ತಲಾ ೨ ಸಾವಿರ ರೂ. ಜಮೆಗೊಳ್ಳಲಿದೆ. ಸಿದ್ಧರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಬಿಪಿಎಲ್ ಕಾರ್ಡ್ ದಾರರಿಗೆ ತಲಾ ೧೦ ಕೆ.ಜಿ. ಅಕ್ಕಿಯ ಕೊಡಲು ಆರಂಭಿಸಿದ ರಾಜ್ಯ ಸರಕಾರ, ಒಬ್ಬರಿಗೆ ೫ ಕೆ.ಜಿ.ಯಂತೆ ಅಕ್ಕಿ ಹಾಗೂ ೫ ಕೆ.ಜಿ. ಯ ಹಣ ನೀಡುವ ಅನ್ನಭಾಗ್ಯ ಯೋಜನೆ, ನಂತರ ಮಹಿಳೆಯರಿಗೆ ಸರಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದಶಕ್ತಿ’ ಯೋಜನೆ, ಆ ಬಳಿಕ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವ ಗೃಹ ಜ್ಯೋತಿ ಯೋಜನೆಗಳನ್ನು ಜಾರಿಗೊಳಿಸಿದೆ.


ಇದೀಗ ಪ್ರತೀ ಮನೆಯ ಓರ್ವ ಗೃಹಿಣಿಗೆ ತಿಂಗಳಿಗೆ ರೂ.೨೦೦೦ ನೀಡುವ ಮಹತ್ವದ ಗೃಹಲಕ್ಷ್ಮಿ ಯೋಜನೆ ಜಾರಿಗೆ ಸರಕಾರ ದಿನಾಂಕ ನಿಗದಿಗೊಳಿಸಿದೆ. ಆ.೩೦ರಂದು ಬುಧವಾರ ಮುಖ್ಯಮಂತ್ರಿ ಸಿದ್ಧರಾಮಯ್ಯರರವರು ತಮ್ಮ ತವರು ಜಿಲ್ಲೆಯಾದ ಮೈಸೂರಲ್ಲಿ ಯೋಜನೆಗೆ ಚಾಲನೆ ನೀಡಲಿದ್ದು, ಅದರ ನೇರ ಪ್ರಸಾರ ಇಡೀ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ನಡೆಯಲಿದೆ.
ಸುಳ್ಯದಲ್ಲಿ ಸಿದ್ಧತೆ: ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಕೊಡುವ ಕಾರ್ಯಕ್ರಮವನ್ನು ನೇರಪ್ರಸಾದರ ಮಾಡಲು ಸುಳ್ಯ ತಾಲೂಕಲ್ಲಿ ಭರ್ಜರಿ ಸಿದ್ಧತೆ ಆರಂಭಗೊಂಡಿದೆ. ಸುಳ್ಯ ತಾಲೂಕಿನಲ್ಲಿ ಒಟ್ಟು ೨೭೬೩೩ ಮಂದಿ ಪಡಿತರ ಕಾರ್ಡುದಾರರಿದ್ದು, ಅವರಲ್ಲಿ ೨೪೨೮೮ಮಂದಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ್ದಾರೆ. ಸುಳ್ಯ ನಗರ ವ್ಯಾಪ್ತಿಯಲ್ಲಿ ೩೭೧೫ ಮಂದಿ ಪಡಿತರ ಕಾರ್ಡುದಾರರಿದ್ದು, ಅವರಲ್ಲಿ ೨೬೯೯ ಮಂದಿ ಅರ್ಜಿ ಹಾಕಿದ್ದರೆ, ತಾಲೂಕಿನ ೨೫ ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ೨೩೯೧೮ ಪಡಿತರದಾರರಿದ್ದು ೨೧೫೮೯ ಮಂದಿ ಅರ್ಜಿ ಹಾಕಿದ್ದಾರೆ.
ತಾಲೂಕಲ್ಲಿ ೨೭ ಸಭೆ : ಸುಳ್ಯ ನಗರ ಪಂಚಾಯತ್ ಆವರಣದಲ್ಲಿರುವ ಬಾಬು ಜಗಜ್ಜೀವನ ರಾಂ ಸಭಾಂಗಣದಲ್ಲಿ ಮತ್ತು ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ಆ.೩೦ ರಂದು ೧೦.೩೦ ಕ್ಕೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಸಮಾವೇಶ ನಡೆಯಲಿದೆ.
ನಗರ ವ್ಯಾಪ್ತಿಯಲ್ಲಿ ಗೃಹಲಕ್ಷ್ಮಿಗೆ ಅರ್ಜಿ ಹಾಕಿದವರೆಲ್ಲ ಅಂದು ಅಲ್ಲಿಗೆ ಬರಬೇಕು. ಸುಮಾರು ಒಂದೂವರೆ ಸಾವಿರ ಜನರಿಗೆ ಅಲ್ಲಿ ಕುಳಿತುಕೊಳ್ಳುವ ಹಾಗೂ ಲಘು ಉಪಾಹಾರದ ವ್ಯವಸ್ಥೆಯನ್ನು ನಗರ ಪಂಚಾಯತ್ ಮಾಡುತ್ತದೆ.
ಅದೇ ರೀತಿ ಎಲ್ಲಾ ೨೫ ಗ್ರಾ.ಪಂ. ಗಳಲ್ಲಿ ಕೂಡಾ ಕನಿಷ್ಠ ೨೦೦ ಮಂದಿ ಮಹಿಳೆಯರ ಸಮಾವೇಶ ಪಂಚಾಯತ್ ನೇತೃತ್ವದಲ್ಲಿ ನಡೆಯಲಿದೆ. ಅಲ್ಲಿ ಕೂಡಾ ಲಘು ಉಪಾಹಾರದ ವ್ಯವಸ್ಥೆ ಇರಲಿದೆ.
ಪ್ರತೀ ಗ್ರಾಮ ಪಂಚಾಯತ್‌ಗಳಲ್ಲಿ ಮತ್ತು ನಗರ ಪಂಚಾಯತ್‌ನಲ್ಲಿ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಈ ಸಮಾವೇಶವನ್ನು ಯಶಸ್ವಿಗೊಳಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಪ್ರತೀ ಅಂಗನವಾಡಿ ಕಾರ್ಯಕರ್ತೆಯರಿಗೆ ಆಶಾ ಕಾರ್ಯಕರ್ತೆಯರಿಗೆ ಹಾಗೂ ಸಂಜೀವಿನಿ ಒಕ್ಕೂಟದ ಎನ್.ಆರ್.ಎಲ್.ಎಂ. ಮತ್ತು ಎಂ.ಬಿ.ಕೆ. ಗಳಿಗೆ ಜವಾಬ್ದಾರಿ ನೀಡಲಾಗಿದೆ. ಪ್ರತಿ ಫಲಾನುಭವಿಗಳ ಮನೆಗೆ ಆಮಂತ್ರಣ ವಿತರಿಸಲು ತಿಳಿಸಲಾಗಿದೆ. ಮೈಕ್ ಅನೌನ್ಸ್ ಕೂಡಾ ಮಾಡಲಾಗುವುದು. ಕಾರ್ಯಕ್ರಮ ಯಶಸ್ವಿಗೊಳ್ಳುವಂತೆ ನೋಡಿಕೊಳ್ಳಲು ಪ್ರತೀ ಗ್ರಾ.ಪಂ. ಗಳಿಗೂ ನೋಡೆಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಎಂದು ಸುಳ್ಯದ ಪ್ರಭಾರ ಸಿ.ಡಿ.ಪಿ.ಒ. ಶ್ರೀಮತಿ ಶೈಲಜಾ ಕುಕ್ಕುಜಡ್ಕ ತಿಳಿಸಿದ್ದಾರೆ.

ನೋಡೆಲ್ ಅಧಿಕಾರಿಗಳ ವಿವರ ಇಂತಿದೆ
ಅಜ್ಜಾವರ ಮತ್ತು ಮಂಡೆಕೋಲು : ಶ್ರೀಮತಿ ಶೀತಲ್, ಕ್ಷೇತ್ರ ಸಮನ್ವಯಾಧಿಕಾರಿ ಶಿಕ್ಷಣ ಇಲಾಖೆ
ಜಾಲ್ಸೂರು ಮತ್ತು ಕನಕಮಜಲು : ಶ್ರೀಮತಿ ವೀಣಾ ಎಂ.ಟಿ., ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು
ಉಬರಡ್ಕ ಮತ್ತು ಮರ್ಕಂಜ : ವಿಜೇತ್ ಎಸ್ ಸಹಹಾಯಕ ತೋಟಗಾರಿಕಾ ಅಧಿಕಾರಿ
ಅರಂತೋಡು ಮತ್ತು ಸಂಪಾಜೆ : ಅರಬಣ್ಣ ಪೂಜಾರಿ, ಸಹಾಯಕ ತೋಟಗಾರಿಕಾ ಅಧಿಕಾರಿ
ದೇವಚಳ್ಳ ಮತ್ತು ನೆಲ್ಲೂರು ಕೆಮ್ರಾಜೆ : ರಮ್ಯ ಬಿ.ಆರ್.ಪಿ. ಕ್ಷೇತ್ರ ಸಂಪನ್ಮೂಲ ಕೇಂದ್ರ
ಹರಿಹರ ಪಲ್ಲತಡ್ಕ ಮತ್ತು ಕೊಲ್ಲಮೊಗ್ರು : ಶ್ರೀಮತಿ ಪಿ. ದೀಪಿಕಾ ಮೇಲ್ವಿಚಾರಕಿ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.
ಮಡಪ್ಪಾಡಿ ಮತ್ತು ಗುತ್ತಿಗಾರು : ದೇವರಾಜ್ ಮುತ್ಲಾಜೆ, ಬಿ.ಐ.ಇ. ಆರ್.ಟಿ. ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ,
ಪಂಜ ಮತ್ತು ಕಲ್ಮಡ್ಕ : ಶ್ರೀಮತಿ ರವೀಶ್ರೀ ಕೆ, ಮೇಲ್ವಿಚಾರಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಬಾಳಿಲ ಮತ್ತು ಮುರುಳ್ಯ : ಶ್ರೀಮತಿ ಉಷಾ ಎಂ. ಮೇಲ್ವಿಚಾರಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಕಳಂಜ ಮತ್ತು ಕೊಡಿಯಾಲ : ಶ್ರೀಮತಿ ವಿಜಯ ಜೆ.ಡಿ. ಮೇಲ್ವಿಚಾರಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಬೆಳ್ಳಾರೆ ಮತ್ತು ಪೆರುವಾಜೆ : ಶ್ರೀಮತಿ ನಳಿನಿ ಕೆ., ಶಿಕ್ಷಣ ಸಂಯೋಜಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ
ಐವರ್ನಾಡು ಮತ್ತು ಅಮರಮುಡ್ನೂರು : ಶ್ರೀಮತಿ ಸಂಧ್ಯಾ ಕುಮಾರಿ ಬಿ.ಎಸ್. ಶಿಕ್ಷಣ ಸಂಯೋಜಕರು ಬಿ.ಇ.ಒ ಕಚೇರಿ
ಆಲೆಟ್ಟಿ : ಶ್ರೀಮತಿ ಗೀತಾ, ತಾ| ಕಲ್ಯಾಣಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸುಳ್ಯ