ಕಲ್ಮಡ್ಕ ಗ್ರಾ.ಪಂ. ಅಧ್ಯಕ್ಷ ಮಹೇಶ್ ಕುಮಾರ್ ರಿಗೆ ಪಂಬೆತ್ತಾಡಿ ಪ್ರಾ.ಕೃ.ಪ.ಸ ಸಂಘದಲ್ಲಿ ಸನ್ಮಾನ

0

ಕಲ್ಮಡ್ಕ ಗ್ರಾ.ಪಂ.ನ 2ನೇ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಪಂಬೆತ್ತಾಡಿ ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಮಹೇಶ್ ಕುಮಾರ್ ಕರಿಕ್ಕಳರಿಗೆ ಅ. 29ರಂದು ನಡೆದ ಸಂಘದ ಸಾಮಾನ್ಯ ಸಭೆಯಲ್ಲಿ ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಜಾಕೆ ಮಾಧವ ಗೌಡ, ಉಪಾಧ್ಯಕ್ಷ ಕುಲ್ದೀಪ್ ಸುತ್ತುಕೋಟೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪುರುಷೋತ್ತಮ ಶೆಟ್ಟಿ, ನಿರ್ದೇಶಕರಾದ ಧರ್ಮಣ್ಣ ನಾಯ್ಕ, ಗಣೇಶ್ ಭೀಮಗುಳಿ, ಜಯರಾಮ ಬೆಳಗಜೆ, ವೆಂಕಪ್ಪ ಎನ್.ಪಿ, ಶ್ರೀನಿವಾಸ ಭೀಮಗುಳಿ, ಶ್ರೀಮತಿ ಮೂಕಾಂಬಿಕಾ, ಶ್ರೀಮತಿ ಭಾಗೀರಥಿ ಮತ್ತು ಲೋಹಿತಾಕ್ಷ ಚೀಮುಳ್ಳು ಹಾಗೂ ಸಂಘದ ಸಿಬ್ಬಂದಿ ವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.