ಕಲ್ಮಡ್ಕ ಗ್ರಾಮ ಪಂಚಾಯತಿನ 2022-23 ನೇ ಸಾಲಿನ ಜಮಾಬಂದಿ ಸಭೆ

0

ಕಲ್ಮಡ್ಕ ಗ್ರಾಮ ಪಂಚಾಯತಿನ 2022-23 ನೇ ಸಾಲಿನ ಜಮಾಬಂದಿ ಸಭೆಯನ್ನು ಆ.29ರಂದು ಕಲ್ಮಡ್ಕ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷರಾದ ಶ್ರೀ ಮಹೇಶ್ ಕುಮಾರ್ ಕೆ.ಎಸ್ ಇವರ ಅಧ್ಯಕ್ಷತೆಯಲ್ಲಿ ಜಮಾಬಂದಿ ಅಧಿಕಾರಿಯಾಗಿ ಜಿಲ್ಲಾ ಪಂಚಾಯತಿನ ಉಪ ಕಾರ್ಯದರ್ಶಿಯವರಾದ ಶ್ರೀ ರಘು ಎ.ಇ ಕೆ.ಎ.ಎಸ್ ಇವರ ಉಪಸ್ಥಿತಿಯಲ್ಲಿ ನಡೆಸಲಾಯಿತು.

ಈ ಸಮಯದಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಮೋಹಿನಿ ಎಂ, ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಹಾಜಿರಾ ಗಫೂರ್, ಸದಸ್ಯರಾದ ಶ್ರೀ ಲೋಕೇಶ್ ಆಕ್ರಿಕಟ್ಟೆ, ಶ್ರೀಮತಿ ಮೀನಾಕ್ಷಿ ಕೆ, ಲೋಕಯ್ಯ ನಾಯ್ಕ ,ತಾಲೂಕು ಪಂಚಾಯತ್ ನಿಕಟಪೂರ್ವ ಸದಸ್ಯರಾದ ಶ್ರೀ ಅಬ್ದುಲ್ ಗಫೂರ್, ಅಭಿವೃದ್ಧಿ ಅಧಿಕಾರಿ ಶ್ರೀ ಕೀರ್ತಿಪ್ರಸಾದ್ ಸಿ.ಎಂ ಮತ್ತು ನಿಕಟಪೂರ್ವ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಸಿ.ವಿ, ಕಾರ್ಯದರ್ಶಿ ಗೋಪಾಲಕೃಷ್ಣ ಕೆ, ಎಂ.ಬಿ.ಕೆ, ಎನ್.ಅರ್.ಎಲ್.ಎಂ ಸಂಘದ ಸದಸ್ಯರು ಗ್ರಾಮಸ್ಥರು ಭಾಗವಹಿಸಿದ್ದರು