ಅರಂತೋಡು: ಯುವಕರ ಮದ್ಯೆ ಪರಸ್ಪರ ಹೊಡೆದಾಟ

0

ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು

ಅರಂತೋಡಿನ ಕೆಲ ಯುವಕರು ಜಗಳ ಮಾಡಿಕೊಂಡು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ತೊಡಿಕಾನ ಗ್ರಾಮದ ಪರ್ನೋಜಿಯಲ್ಲಿ ಆ.27ರಂದು ರಾತ್ರಿ ವರದಿಯಾಗಿದೆ.

ಪೆರಾಜೆ ಗ್ರಾಮದ ಕೋಡಿಯ ಯುವಕನೋರ್ವ ಅಡ್ಯಡ್ಕದ ಪರ್ನೋಜಿಯಲ್ಲಿರುವ ಮದ್ಯದ ಅಂಗಡಿಯೊಂದರಲ್ಲಿ ಮದ್ಯ ಸೇವಿಸುವ ಸದರ್ಭದಲ್ಲಿ ಅಬಕಾರಿ ಅಧಿಕಾರಿಯವರು ದಾಳಿ ಮಾಡಿ ಅಂಗಡಿಯವರಿಗೆ ದಂಡ ವಿಧಿಸಿದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಅರಂತೋಡಿನ ಉಳುವಾರಿನ ಯುವಕನೋರ್ವ ಇದೇ ಮದ್ಯದ ಅಂಗಡಿಗೆ ಬಂದರೆನ್ನಲಾಗಿದೆ. ಈ ವೇಳೆ ಕೋಡಿಯ ಯುವಕ ಹಾಗೂ ಉಳುವಾರಿನ ಯುವಕನ ಮಧ್ಯೆ ಪರಸ್ಪರ ಮಾತಿನ ಚಕಮಕಿ ನಡೆದು ಕೋಡಿಯ ಯುವಕ ಉಳುವಾರಿನ ಯುವಕನಲ್ಲಿ ನಿನ್ನಿಂದಾಗಿ ಇಲ್ಲಿಗೆ ಪೊಲೀಸ್ ದಾಳಿ ನಡೆಯಿತು ಎಂದು ಹೇಳಿ ಪರಸ್ಪರ ಹೊಡೆದಾಟ ನಡೆಯಿತು ಎನ್ನಲಾಗಿದೆ.
ಈ ಕುರಿತು ಇಬ್ಬರು ಯುವಕರ ಪರವಾಗಿ ಜನ ಸೇರತೊಡಗಿ, ಅರಂತೋಡು ಪೇಟೆಯವರೆಗೆ ಪರಸ್ಪರ ಚರ್ಚೆ, ವಾಗ್ವಾದ ನಡೆಯಿತೆನ್ನಲಾಗಿದೆ.

ಮುಂದುವರಿದ ಭಾಗವಾಗಿ ಆ.29ರಂದು ಕೋಡಿಯ ಯುವಕರು, ಮರ್ಕಂಜದ ಯುವಕರನ್ನು ಓಮ್ನಿಯಲ್ಲಿ ಅರಂತೋಡಿಗೆ ಕರೆದುಕೊಂಡು ಬಂದಾಗ ಸುಳ್ಯ ಪೊಲೀಸರಿಗೆ ವಿಷಯ ತಿಳಿದು ಅವರು ಸ್ಥಳಕ್ಕೆ ಹೋಗಿರುವುದಾಗಿ ಎಂದು ತಿಳಿದುಬಂದಿದೆ.