ಮಂಡೆಕೋಲಿನ ಡೆಂಜಿಗುರಿ ಎಂಬಲ್ಲಿ ರಾತ್ರಿ ಸುಮಾರು 10 ಗಂಟೆ ವೇಳೆಗೆ ಕಾಡುಕೋಣ ರಸ್ತೆ ದಾಟುತ್ತಿದ್ದ ಸಂದರ್ಭ ಅದೇ ರಸ್ತೆಯಾಗಿ ಓಮ್ನಿ ಕಾರಿಗೆ ಹಾನಿ ತಾಗಿ, ಓಮ್ನಿ ಪಲ್ಟಿಯಾದ ಘಟನೆ ವರದಿಯಾಗಿದೆ.
ಕಾಡುಕೋಣ ಓಡಿಕಾಡು ಸೇರಿದರೆ, ಓಮ್ನಿ ಜಖಂಗೊಂಡಿದೆ.
ವಿಷಯ ತಿಳಿದು ಸ್ಥಳೀಯರು ಸೇರಿದರು. ಚಾಲಕನಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಸ್ಥಳೀಯರ ಆಕ್ರೋಶ : ಮಂಡೆಕೋಲು ಗ್ರಾಮದ ಮುಖ್ಯ ರಸ್ತೆಯ ಬದಿಯಲ್ಲಿ ದೊಡ್ಟದೊಡ್ಡ ಮರಗಳಿವೆ. ಕಾಡುಕೋಣಗಳು ರಾತ್ರಿ ವೇಳೆ ಮರದ ಅಡ್ಡ ನಿಂತಿದ್ದರು ವಾಹನ ಸವಾರರಿಗೆ ಗೊತ್ತಾಗುವುದಿಲ್ಲ. ಬೆಳಕು ಕಂಡಾಗ ಅವು ರಸ್ತೆ ದಾಟುವ ವೇಳೆ ಅವಘಡಗಳು ಸಂಭವಿಸುತ್ತದೆ. ಆದ್ದರಿಂದ ಇಲಾಖೆ ಮರ ತೆರವಿಗೆ ಸೂಕ್ತ ಕ್ರಮಕೈಗೊಳ್ಳಬೇಕು. ಹಾಗೂ ಮಳೆಗಾದಲ್ಲಿ ರಸ್ತೆ ಬದಿ ಬಿದ್ದಮರಗಳ ತೆರವು ಇನ್ನೂ ಆಗಿಲ್ಲ.ಅದನ್ನೂ ಮಾಡಬೇಕೆಂದು ಸ್ಥಳೀಯ ನಿವಾಸಿಗಳು ಅಹವಾಲು ಹೇಳಿಕೊಂಡಿದ್ದಾರೆ.