ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ಸುರಕ್ಷತಾ ಅರಿವು ಕಾರ್ಯಕ್ರಮ

0

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ಸುರಕ್ಷತಾ ಅರಿವು ಕಾರ್ಯಕ್ರಮ 1 ರ0ದು ಜರಗಿತು.

ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಇಂಚರ ಪೌಂಡೇಶನ್ನಿನ ಕು. ಸೌಜನ್ಯ ರವರು ಮಾತನಾಡಿ “ನಮ್ಮ ದೇಹದ ಸುರಕ್ಷತೆ ಬಗ್ಗೆ ನಾವು ಜಾಗ್ರತೆ ವಹಿಸಬೇಕು. ಸುರಕ್ಷಿತ ಮತ್ತು ಸುರಕ್ಷಿತವಲ್ಲದ ಸ್ಪರ್ಶದ ಬಗ್ಗೆ ಜ್ಞಾನ ಹೊಂದಿರಬೇಕು. ಸುರಕ್ಷಿತವಲ್ಲದ ಸ್ಪರ್ಶದ ಅನುಭವವಾದರೆ ಆ ಸಂದರ್ಭದಲ್ಲಿ ಮುಕ್ತವಾಗಿ ನಮ್ಮ ಹೆತ್ತವರ ಬಳಿ ಅಥವಾ ಶಿಕ್ಷಕರ ಬಳಿ ತಿಳಿಸಬೇಕು. ಚೈಲ್ಡ್ ಲೈನ್ ಕೇರ್ 1098 ನಂಬರ್ ಅನ್ನು ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಬಳಸಲು ತಿಳಿದಿರಬೇಕು. ನಮ್ಮ ವೈಯಕ್ತಿಕ ಪರಿಧಿಗೆ ಅಥವಾ ಅಗತ್ಯಕ್ಕಿಂತ ಹತ್ತಿರ ಬಂದು ಮಾತನಾಡುವವರಿಂದ ದೂರ ಇರಬೇಕು. ವಿದ್ಯಾರ್ಥಿಗಳು ಪೋಕ್ಸೋ ಕಾಯ್ದೆ ಬಗ್ಗೆ ತಿಳಿದಿರಬೇಕು. ಪರಿಚಿತರಿಂದಲೇ ದೌರ್ಜನ್ಯಕ್ಕೆ ಒಳಗಾಗುವ ಸಂದರ್ಭದಲ್ಲಿ ಅದರ ವಿರುದ್ಧ ಧ್ವನಿ ಎತ್ತಬೇಕು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಮಾತನಾಡಿ “ಇದು ಅತ್ಯಂತ ಒಳ್ಳೆಯ ಕಾರ್ಯಕ್ರಮವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಯಾವುದೇ ದುರ್ಘಟನೆಗಳು ನಡೆದ ಸಂದರ್ಭದಲ್ಲಿ ಹೆತ್ತವರೊಂದಿಗೆ ಮತ್ತು ಶಿಕ್ಷಕರೊಂದಿಗೆ ಮುಕ್ತವಾಗಿ ಸಮಸ್ಯೆಯನ್ನು ಹೇಳಬೇಕು ಮತ್ತು ವೈಯಕ್ತಿಕ ರಕ್ಷಣೆಗಾಗಿ ಸದಾ ಸನ್ನದ್ಧರಾಗಿರಬೇಕು” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಅವರು ಸ್ವಾಗತಿಸಿದರು. ಶಿಕ್ಷಕ ದೇವಿ ಪ್ರಸಾದ ಜಿ ಸಿ ವಂದಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.