ಕೆವಿಜಿ ಐಪಿಎಸ್ ನಲ್ಲಿ ಅಣಕು ಸಂಸತ್ತು

0

ಸುಳ್ಯದ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ವಿದ್ಯಾರ್ಥಿಗಳಿಗಾಗಿ 2023-24ನೇ ಸಾಲಿನ ಅಣಕು ಸಂಪತ್ತನ್ನು ಸೆ.01 ರಂದು ಶಾಲಾ ಹೆರಿಟೇಜ್ ಕ್ಲಬ್ ವತಿಯಿಂದ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಶಾಲಾ ಆಡಳಿತ ಮಂಡಳಿಯ ಸಂಚಾಲಕ ಡಾ. ರೇಣುಕಾಪ್ರಸಾದ್ ಕೆ. ವಿ, ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು. ಜೆ ಶುಭ ಹಾರೈಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಸಭಾಪತಿ ಹತ್ತನೇ ತರಗತಿಯ ಹಿಬಾ ಹನನ್ ಸಂಸತ್ತಿನ ನಿಯಮಗಳ ಬಗ್ಗೆ ಮತ್ತು ಸಂಸದೀಯ ಸರಕಾರದ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ನೀಡಿದರು. ಬಳಿಕ ಕಾರ್ಯದರ್ಶಿ ಸ್ಥಾನವನ್ನು ಅಲಂಕರಿಸಿದ ಹತ್ತನೇ ತರಗತಿಯ ರಾಮ್ ಕಟ್ಟ ವರದಿ ಮಂಡನೆ ಮಾಡಿದರು. 9ನೇ ತರಗತಿಯ ಶಶಾಂಕ್ ಉಪ ಸಭಾಪತಿ ಸ್ಥಾನವನ್ನು ಅಲಂಕರಿಸಿದರೆ, ಹತ್ತನೇ ತರಗತಿಯ ಅಕ್ಷಯ್ ಎನ್ ಮುರೂರು ಜತೆ ಕಾರ್ಯದರ್ಶಿ ಸ್ಥಾನವನ್ನು ಅಲಂಕರಿಸಿದರು .

ಶಾಲಾ ಮಂತ್ರಿಮಂಡಲದ ನಾಯಕ ಹತ್ತನೇ ತರಗತಿಯ ಅಹ್ಮದ್ ಅನ್ಸಿಫ್ ಮತ್ತು ನಾಯಕಿ ಫಲಕ್ ಫಾರೂಕ್ ಇತರ ಸದಸ್ಯರು ಗಳೊಂದಿಗೆ ಶಾಲೆಯ ವಿದ್ಯಾರ್ಥಿ ಸಂಸತ್ತಿನ ಕಲಾಪವನ್ನು ಮುನ್ನಡೆಸಿದರು . ಹತ್ತನೇ ತರಗತಿಯ ತನ್ವಿ ಜೆ ನಾಯಕ್ ಮತ್ತು ಶಿಶಿರ್ ಗಿರೀಶ್ ವಿರೋಧಪಕ್ಷದ ನಾಯಕರಾಗಿ ಕಲಾಪವನ್ನು ನಡೆಸಿದರು. ಎಂಟನೇ ತರಗತಿಯ ಮುಹಮ್ಮದ್ ಸಮಝ್ ಮತ್ತು ಮೊಹಮ್ಮದ್ ಶಿಯನ್ ಸಭಾಪತಿಗೆ ಬೆಂಗಾವಲಿಗರಾಗಿ ಕಾರ್ಯನಿರ್ವಹಿಸಿದರೆ, ಹತ್ತನೇ ತರಗತಿಯ ಅಂಶಿ,ವಂಶಿ ಮತ್ತು ಅರುಂಧತಿ ಮಾಧ್ಯಮ ಮಿತ್ರರಾಗಿ ಕಾರ್ಯವನ್ನು ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಅರುಣ್ ಕುಮಾರ್, ಉಪಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಮತ್ತು ಇತರ ಶಿಕ್ಷಕರು ಭಾಗವಹಿಸಿದರು. ಕಾರ್ಯಕ್ರಮದ ಕೊನೆಗೆ ಪ್ರಾಂಶುಪಾಲರು ‘ ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣ ರೂಢಿಸಿಕೊಳ್ಳುವುದು ಹಾಗೂ ಸಂಸತ್ತಿನಲ್ಲಿ ನಡೆಯುವ ಕಾರ್ಯ ಕಲಾಪದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಶಾಲೆಯಲ್ಲಿ ಅಣಕು ಸಂಸತ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ’ಎಂದರು. ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.