ವಿಪತ್ತು ನಿರ್ವಹಣಾ ಘಟಕದಿಂದ ಅಪಾಯಕಾರಿ ಮರ ತೆರವು ಮತ್ತು ಆಣೆಕಟ್ಟು ಸ್ವಚ್ಛತಾ ಕಾರ್ಯ

0

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಘಟಕ ದೊಡ್ಡತೋಟದ ವತಿಯಿಂದ ಅಪಾಯಕಾರಿ ಮರ ತೆರವು ಮತ್ತು ಕಿಂಡಿ ಆಣೆಕಟ್ಟು ಸ್ವಚ್ಛತಾ ಸೇವಾ ಕಾರ್ಯ ಸೆ.2ರಂದು ನಡೆಯಿತು.

ಮುಡ್ನೂರು ಮರ್ಕಂಜ ಹಿರಿಯ ಪ್ರಾಥಮಿಕ ಶಾಲೆಯ ಸಮೀಪ ಅಪಾಯಕಾರಿ ಮರವನ್ನು ತೆರವುಗೊಳಿಸಲಾಯಿತು. ಶಾಲೆಯ ಕುಡಿಯುವ ನೀರಿನ ಟ್ಯಾಂಕ್ ನ್ನು ಸ್ವಚ್ಛ ಗೊಳಿಸಲಾಯಿತು. ಅಲ್ಲದೆ ತೆಂಗಿನ ಸಸಿ ನಾಟಿ ಮಾಡಲಾಯಿತು. ಶಾಲೆಯ ವತಿಯಿಂದ ಊಟ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಎಸ್.ಡಿ.ಎಂ.ಸಿ.‌ಅಧ್ಯಕ್ಷೆ ಮೀನಾಕ್ಷಿ ಮತ್ತು‌ ಸದಸ್ಯರು, ಶಿಕ್ಷಕ ವೃಂದ ಉಪಸ್ಥಿತರಿದ್ದರು.

ಬಳಿಕ ಮರ್ಕಂಜ ಭಾಗದ ಜಿರ್ಮುಕಿ, ಅಡಿಕೆ ಹಿತ್ಲು ಎಂಬಲ್ಲಿ ಕಿಂಡಿ ಆಣೆಕಟ್ಟು ವಿನ ಸ್ವಚ್ಛತಾ ಕಾರ್ಯ ಮಾಡಲಾಯಿತು. ಸೇವಾ ಕಾರ್ಯದಲ್ಲಿ ಘಟಕದ ಸದಸ್ಯರಾದ ಘಟಕದ ಸಂಯೋಜಕಿ ಸವಿತಾ, ಪ್ರತಿನಿಧಿ ವೆಂಕಟ್ರಮಣ ಡಿಜಿ, ಅಚ್ಯುತ ಎಮ್, ಪ್ರಸಾದ್ ಶೇಣಿ, ಸುಂದರ ಶೇಣಿ, ಗುರುದೀಪ್, ಮೋಹನ ಜಿ., ನವೀನ, ಶಶಿಧರ, ಕರುಣಾಕರ, ಪ್ರವೀಣ, ಶಶಿಕಲಾ, ಭಾರತಿ, ವೀಣಾ ಪಡ್ಪು ಮತ್ತು ಹೊಸ ಸೇರ್ಪಡೆಯಾದ ದಿನೇಶ್ ಪಡ್ಪು ರವರು ಪಾಲ್ಗೊಂಡಿದ್ದರು.