ರೆಂಜಾಳ ಶ್ರೀ ಶಾಸ್ತಾವು ಯುವಕ ಮಂಡಲಕ್ಕೆ ಯುವಕ ಮಂಡಲ ವಿಭಾಗದಲ್ಲಿ ಪ್ರಥಮ ಸ್ಥಾನ

0

2022-23ನೇ ಸಾಲಿನ‌ ಗಮನಾರ್ಹ ಸಾಧನೆ ತೋರಿದ ರೆಂಜಾಳ ಶ್ರೀ ಶಾಸ್ತಾವು ಯುವಕ ಮಂಡಲಕ್ಕೆ ಯುವಕ ಮಂಡಲ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಸುಳ್ಯ ಯುವಜನ ಸಂಯುಕ್ತ ಮಂಡಳಿ ಕೊಡಲ್ಪಡುವ ಈ ಪ್ರಶಸ್ತಿಯನ್ನು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ನಡೆದ ಜಾನಪದ ಸಾಂಸ್ಕೃತಿಕ ವೈಭವ “ನಲಿಪು-2023” ರ ಕಾರ್ಯಕ್ರಮ ದಲ್ಲಿ ವಿತರಿಸಲಾಯಿತು. ಯುವಕ ಮಂಡಲದ ಅಧ್ಯಕ್ಷ ಶಶಿಕಾಂತ ಗುಳಿಗಮೂಲೆ ಮತ್ತು ಸದಸ್ಯರು ಪ್ರಶಸ್ತಿ ಸ್ವೀಕರಿಸಿದರು.