ಮೈಸೂರಿನ ಎರಡು ತಂಡಗಳಿಗೆ ಒಲಿದ ವಿನ್ನರ್- ರನ್ನರ್ ಪ್ರಶಸ್ತಿ
ಸುಳ್ಯ ಯುವಜನ ಸಂಯುಕ್ತ ಮಂಡಳಿಯ ವತಿಯಿಂದ ಕುಕ್ಕುಜಡ್ಕ ಪ್ರೌಢಶಾಲೆಯ ಸುವರ್ಣ ರಂಗ ಮಂದಿರದಲ್ಲಿ ಸೆ.2 ರಂದು ನಡೆದ ನಲಿಪು 2023 ಜನಪದ ಪ್ರಕಾರಗಳ ಮುಕ್ತ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ- ವಿಶ್ವನಾಥ ತಂಡ ಮೈಸೂರು, ದ್ವಿತೀಯ- ಪುನೀತ್ ತಂಡ ರನ್ನರ್ , ತೃತೀಯ ಸ್ಥಾನಿಯಾಗಿ ಮಯೂರಿ ಯುವತಿ ಮಂಡಲ ಚೊಕ್ಕಾಡಿ, ಚತುರ್ಥ ಬಹುಮಾನ ಶೃತಿ ಯುವತಿ ಮಂಡಲ ಕಂದ್ರಪ್ಪಾಡಿ
ಪಡೆದುಕೊಂಡಿತು.
ಸ್ಪರ್ಧೆ ಮುಗಿದ ಬಳಿಕ
ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ನಗದು ಬಹುಮಾನ ಹಾಗೂ ಶಾಶ್ವತ ಫಲಕ ವಿತರಿಸಲಾಯಿತು. ಭಾಗವಹಿಸಿದ 11 ತಂಡಗಳಿಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ನೀಡಲಾಯಿತು.
ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ತೇಜಸ್ವಿ ಕಡಪಳ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ
ರಾಧಾಕೃಷ್ಣ ಇಟ್ಟಿಗುಂಡಿ, ಸೋಮಶೇಖರ ಹಾಸನಡ್ಕ, ಕೃಷ್ಣಪ್ಪ ಕೋಡ್ತುಗುಳಿ, ಮಾಯಿಲಪ್ಪ ಸಂಕೇಶ, ಹರಿಪ್ರಸಾದ್ ರೈ ಶೇಣಿ, ಎ.ಎಲ್.ಸಂಕೀರ್ಣ ಚೊಕ್ಕಾಡಿ, ಅರುಣ್ ಕುಮಾರ್ ನಾಯರ್ ಕಲ್ಲು, ದಯಾನಂದ ಕೇರ್ಪಳ, ಸಂಜಯ್ ನೆಟ್ಟಾರು,
ಜೈದೀಪ್ ಕಡಪಳ, ಶಶಿಕಾಂತ್ ಮಿತ್ತೂರು, ಕು.ಸ್ವಾತಿ ಪದವು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಪ್ರವೀಣ್ ಕುಮಾರ್ ಜಯನಗರ ಸ್ವಾಗತಿಸಿದರು. ಸಂಜಯ್ ನೆಟ್ಟಾರು ವಂದಿಸಿದರು. ವಿಜಯಕುಮಾರ್ ಉಬರಡ್ಕ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯ ತನಕ ಕಿಕ್ಕಿರಿದು ಕಲಾಭಿಮಾನಿಗಳು ಸೇರಿದ್ದರು.