ಸೋಣಂಗೇರಿ: ಶ್ರೀಕೃಷ್ಣ ಭಜನಾ ಮಂದಿರದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಮಕ್ಕಳಿಗೆ ಆಟೋಟ ಸ್ಫರ್ಧೆ

0

ಜಾಲ್ಸೂರು ಗ್ರಾಮದ ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದ ಆಡಳಿತ ಸಮಿತಿಯ ವತಿಯಿಂದ 30ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಅಂಗನವಾಡಿ ಮತ್ತು ಒಂದನೇ ತರಗತಿಯಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಸೆ.3ರಂದು ನಡೆಸಲಾದ.
ಅಂಗನವಾಡಿ ಪುಟಾಣಿಗಳಿಗೆ ನಡೆದ ಕಾಳುಹೆಕ್ಕುವ ಸ್ಪರ್ಧೆಯಲ್ಲಿ ಪ್ರಥಮ ರೋಶನಿ, ದ್ವಿತೀಯ ಧ್ರತಿ, ತೃತೀಯ ವಿಹಾನ್, ಬಕೆಟ್ ಗೆ ಬಾಲ್ ಹಾಕುವುದು ಪ್ರಥಮ ದಿಶಾ, ದ್ವಿತೀಯ ರುತ್ವಿ, ತೃತೀಯ ಲೋಹಿತ್, ಕಪ್ಪೆ ಜಿಗಿತ ಪ್ರಥಮ ಶ್ರಾವಣಿ, ದ್ವಿತೀಯ ಗಹನ್, ತೃತೀಯ ಗೌತಮ್ ವಿಜೇತರಾದರು.

ಒಂದರಿಂದ ನಾಲ್ಕನೇ ತರಗತಿ ಮಕ್ಕಳಿಗೆ ಏರ್ಪಡಿಸಲಾದ ಹಣತೆ ಹಚ್ಚುವ ಸ್ಪರ್ಧೆಯಲ್ಲಿ ಪ್ರಥಮ ಯಶ್ವಂತ್ ರಾಜ್, ದ್ವಿತೀಯ ಪ್ರಣಮ್ಯ, ತೃತೀಯ ಪೃಥ್ವಿರಾಜ್, ಲಕ್ಕಿಗೇಮ್ ಪ್ರಥಮ ಯದುನಾನ್, ದ್ವಿತೀಯ ಪ್ರಾಪ್ತಿ, ತೃತೀಯ ಚರಿಷ್ಮಾ,
ಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ ಪ್ರಾಪ್ತಿ, ದ್ವಿತೀಯ ತನ್ವಿಕಾ, ತೃತೀಯ ವಾಣಿಶ್ರೀ ವಿಜೇತರಾದರು.

ಐದರಿಂದ ಏಳನೇ ತರಗತಿ ಮಕ್ಕಳಿಗೆ ಏರ್ಪಡಿಸಲಾದ ಶ್ರೀಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ ಕೇಶಿಕಾ, ದ್ವಿತೀಯ ಅಭವ್, ತೃತೀಯ ಯಶ್ವಂತ್ ರಾಜ್, ಹಣತೆ ಹಚ್ಚುವ ಸ್ಪರ್ಧೆಯಲ್ಲಿ ಪ್ರಥಮ ಶ್ರೀಕಾಂತ್, ದ್ವಿತೀಯ ಕೇಶಿಕಾ, ತೃತೀಯ ವಂದನ್, ಲಕ್ಕಿಗೇಮ್ ಪ್ರಥಮ ಸಮರ್ಥ್ ಡಿ. ರಾಜ್, ದ್ವಿತೀಯ ಹೇಮಂತ್, ತೃತೀಯ ರಕ್ಷಿತ್ ವಿಜೇತರಾದರು.
ಎಂಟರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ ನಡೆಸಲಾದ ಲಕ್ಕಿಗೇಮ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಧರಣಿ, ದ್ವಿತೀಯ ವರ್ಷಿಣಿ, ತೃತೀಯ ಧನುಶ್ರೀ, ಹಣತೆ ಹಚ್ಚುವ ಸ್ಪರ್ಧೆಯಲ್ಲಿ ಪ್ರಥಮ ಧನ್ವಿತ್, ದ್ವಿತೀಯ ಮಹೇಶ್, ತೃತೀಯ ಧರಣಿ, ಶ್ರೀಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ ಅಶ್ವಥ್, ದ್ವಿತೀಯ ಅನುಘಸೋನ, ತೃತೀಯ ಸಾನ್ವಿಕಾ ವಿಜೇತರಾಗಿದ್ದಾರೆ.ಸ್ಪರ್ಧಾ ವಿಜೇತರಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಲಾಗುವುದು ಎಂದು ತಿಳಿದುಬಂದಿದೆ.