ಮಾತಿನಲ್ಲೇ ಪ್ರೇರಣೆ ನೀಡುವ ಗುರುಗಳು
ಆಶಾ ನಾದೂರು
ನನ್ನ ವಿದ್ಯಾಭ್ಯಾಸದ ದಾರಿಯಲ್ಲಿ ಎಂದೂ ನೋಡದ ಗುರುಗಳು ಒಬ್ಬರು ಸಿಕ್ಕರು ಕಾಲೇಜಿನ ಸಮಯದಲ್ಲಿ ಅವರೇ ನನ್ನ ಮೆಚ್ಚಿನ ಗುರುಗಳು ನವೀನ್ ಕೆ.ಎಸ್.
ಶಿಕ್ಷಕರೆಂದರೆ ಪಾಠ ಭೋದಿಸುವರು ಮಾತ್ರವಲ್ಲ ಸನ್ಮಾರ್ಗದಲ್ಲಿ ನಡೆಯುವಂತೆ ದಾರಿ ತೋರುವ ಮಾರ್ಗದರ್ಶಕರು ಎಂದು ಇವರನ್ನು ನೋಡಿ ತಿಳಿಯಿತು ನನಗೆ. ಮಾತಿನಲ್ಲೇ ವಿದ್ಯಾರ್ಥಿ ಗಳ ಪ್ರತಿಭೆಗೆ ವೇದಿಕೆ ಕಲ್ಪಿಸುವುದರಲಿ ಸದಾ ಮುಂದೆ .ಯಾವುದೆ ಭೇದ ವಿಲ್ಲದೆ ವಿದ್ಯಾರ್ಥಿಯೆಂಬ ಕಲ್ಲನ್ನು ಸುಂದರ ಶಿಲೆಯಾಗಿಸುವಲ್ಲಿ ನಿಪುಣರು. ವೇದಿಕೆ ಹತ್ತದ ಕೆಲವು ವಿದ್ಯಾರ್ಥಿಗಳನ್ನು ಕೂಡ ಸಮರ್ಥ ನಾಯಕರನಾಗಿ ಮಾಡಿದವರು.ಈ ಸುಂದರ ಬದುಕಿನ ಅನೇಕ ಮೌಲ್ಯಗಳನ್ನು ತಿಳಸಿದವರು ನೀವು. ನಾನು ಇಂದು ಈ ಎರಡು ಸಾಲು ಬರೆಯಲು ಸ್ಪೂರ್ತಿಯು ನೀವೇ ಸರ್.ನನ್ನಂತ ಸಾವಿರಾರು ವಿದ್ಯಾರ್ಥಿಗಳ ಜೀವನಕ್ಕೆ ಹೊಸ ಹುರುಪು ನೀಡಿದ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಗುರುಗಳೇ.
ಆಶಾ ನಾದೂರು
ಬಳ್ಪ