ಗುರು ನಮನ : ಅಮ್ಮನ ಪ್ರೀತಿ ಕೊಟ್ಟ ಗುರು

0

ಸಾಯಿ ನಕ್ಷತ್ರ ಎಂ.ಆರ್.

ನನ್ನ ನೆಚ್ಚಿನ ಗುರುಗಳು ಎಂದರೆ ಅದು ಹೇಮಲತಾ ಮಿಸ್ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ.


ನಾನು “ಲಿಟಲ್ ಏಂಜಲ್ಸ್ “ಪ್ಲೇ ಹೋಂ ನಲ್ಲಿ ೨ವರ್ಷ ಕಲಿತಿದ್ದೇನೆ. ಅಲ್ಲಿ ನನಗೆ ಗುರುಗಳು ಆಗಿದ್ದವರು ಹೇಮಾ ಮಿಸ್. ಅವರೆಂದರೆ ನನಗೆ ತುಂಬಾ ಇಷ್ಟ. ಅವರು ಮನೆಯಲ್ಲಿ ಅಮ್ಮ ಹೇಗೆ ನನ್ನನ್ನು ಪ್ರೀತಿ ಮಾಡುತಿದ್ದರೋ ಅದೇ ರೀತಿ ಪ್ರೀತಿ ಮಾಡಿ ತಪ್ಪುಗಳನ್ನು ಪ್ರೀತಿ ಇಂದ ತಿದ್ದಿ ತಿಳಿಹೇಳುತಿದ್ದರು. ನಮಗೆ ಪಾಠದ ಜೊತೆ ಶ್ಲೋಕಗಳನ್ನು ಭಜನೆ, ಡಾನ್ಸ್, ಸಾಮಾನ್ಯ ಜ್ಞಾನವನ್ನು ತಿಳಿಸಿಕೊಡುತಿದ್ದರು. ನಾನು ಈಗ ೫ನೇ ತರಗತಿಯಲ್ಲಿ ಕಲಿಯುತ್ತಿದ್ದು ಇಂದಿಗೂ ನನ್ನ ಎಲ್ಲಾ ಓದು ಮತ್ತು ಇತರ ಚಟುವಟಿಕೆಗಳಿಗೆ ಪ್ರೋತ್ಸಾಹ ತುಂಬಿ, ಹುರಿದುಂಬಿಸುತ್ತಾ, ಪ್ರಶಸ್ತಿಗಳು ಗಳಿಸಿದಲ್ಲಿ ಬೆನ್ನು ತಟ್ಟುತ್ತಾ ಬಂದಿರುತ್ತಾರೆ. ಹೇಮಾ ಮಿಸ್ ನೀವೆಂದರೆ ನನಗೆ ತುಂಬಾ ಗೌರವ ಮತ್ತು ಪ್ರೀತಿ.

ಸಾಯಿ ನಕ್ಷತ್ರ ಎಂ.ಆರ್.