ಗುರು ನಮನ : ಮುಂದಿನ ಜನ್ಮದಲ್ಲೂ ಗುರುಗಳಾಗಿರಿ ಸದಾ…

0

ಖುಷಿ ನಾಗರಾಜ್

ಸರ್ ತುಂಬಾ ನೆನಪಾಗ್ತಾ ಇದ್ದೀರಾ … ಯಾಕೆ ಏನು ಗೊತ್ತಿಲ್ಲ …ಇದು ಎರಡನೇ ಸಲ ನೀವು ನನ್ನ ಕನಸಲ್ಲಿ ಬಂದು ನಿಮ್ಮನ್ನ ನಾನು ಮಿಸ್ ಮಾಡ್ಕೊಳೋ ಹಾಗೆ ಮಾಡ್ತಾ ಇರೋದು … ಯಾಕೆ ಹೀಗೆ … ನನ್ನ ನಿಮ್ಮ ಪರಿಚಯ ತುಂಬಾ ವರ್ಷ ಹಳೇದು …ಆಗ ನಾನು ೪ ನೇ ಕ್ಲಾಸಿಗೆ ಹೋಗ್ತಾ ಇದ್ದೆ ..ನೀವು ನಮ್ಮ ಪಕ್ಕದ ಊರಿನ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ರಿ … ನಮ್ಮ ಮನೆಯಿಂದ ನೀವು ಹೋಗೊ ಶಾಲೆಗೂ ನಾ ಹೋಗೊ ಶಾಲೆಗೂ ಸಮಾನ ಅಂತರ …ಅದರೆ ಒಂದೇ ವ್ಯತ್ಯಾಸ ಅಂದ್ರೆ ನಾನು ಉತ್ತರ ಆದರೆ ನೀವು ದಕ್ಷಿಣ … ನಾನು ಪೂರ್ವ ಆದ್ರೆ ನೀವು ಪಶ್ಚಿಮ.
ದಿಕ್ಕಿನ ಕಡೆ ಸಾಗ್ತ ಇದ್ದುದ್ದು….ದಿನ ನಮ್ಮ ಭೇಟಿ ಆಗ್ತಾನೆ ಇತ್ತು …ಪ್ರತೀ ದಿನ ನೀವು ಸಿಕ್ಕಗಲೂ ಅಪ್ಪನಲ್ಲಿ ಹೇಳ್ತಾ ಇದ್ದುದ್ದು ” ಮಗಳನ್ನು ನಮ್ಮ ಶಾಲೆಗೆ ಕಳ್ಸಿ .. ನಮ್ಮ ಶಾಲೆಗೆ ಕಳ್ಸಿ ” ಅಂತ … ಆಗ ಅಪ್ಪ ಬರುವ ವರ್ಷ ಹೇಗಿದ್ದರೂ ನಿಮ್ಮ ಶಾಲೆಗೆ ಕಳ್ಸೋದು ಅಂತ ….ಯಾಕೆಂದರೆ ನಾನು ಓದ್ತಾ ಇದ್ದ ಶಾಲೆ ಕಿರಿಯ ಪ್ರಾಥಮಿಕ ಆಗಿದ್ದು ಬರೇ ನಾಲ್ಕನೇ ತರಗತಿವರೆಗೆ ಮಾತ್ರ ಇದ್ದಿದ್ದು …ಅಂತು ಇಂತು ನಾಲ್ಕನೇ ಕ್ಲಾಸ್ ಪಾಸಾಗಿ ಐದನೇ ತರಗತಿಗೆ ಹೋಗೋ ಸಂಭ್ರಮ … ನೀವಾಗಲೇ ಮೋಡಿ ಮಾಡಿ ಆಗಿತ್ತು … ನೀವು ಗಣಿತ ಮತ್ತು ವಿಜ್ಞಾನ ಕ್ಲಾಸ್ ತಗೋತಾ ಇದ್ರಿ … ಗಣಿತ ನನ್ನ ಮೆಚ್ಚಿನ ವಿಷಯವೂ ಆದ್ದರಿಂದಲೂ ಕಲಿಸೋರು ನನ್ನ ಜಿಚಿvoಡಿiಣe ಸರ್ ಆಗಿರೋದರಿಂದಲೋ ಏನೋ ಗಣಿತ ಕಷ್ಟ ಅನ್ನಿಸಲೇ ಇಲ್ಲ .. ನಂಗಿನ್ನೂ ನೆನಪಿದೆ ಒಂದಿನ ಹೋಮ್ ವರ್ಕ್ ಮಾಡದೇ ಇದ್ದಿದ್ದಕ್ಕೆ ನಿಮ್ಮ ಕೈಯಿಂದ ಹೊಡ್ಸಿಕೊಂಡಿದ್ದು .. ಅದೇ ಕೊನೆ ಮತ್ತ್ಯಾವತ್ತೂ ಅಂತ ಘಟನೆ ನಡಿಲೇ ಇಲ್ಲ … ಬಾಲ್ಯ ಎಷ್ಟು ಚಂದ …ಕಪಟವಿಲ್ಲದ ನಿಷ್ಕಲ್ಮಶ ಮನಸ್ಸು ಪ್ರೀತಿ ಬಾಲ್ಯದಲ್ಲಷ್ಟೇ ಕಾಣೋಕೆ ಸಾಧ್ಯವೋ ಏನೋ ? ದಿನ ಹೀಗೇ ಸಾಗ್ತಾ ಇರ್ಬೇಕಾದ್ರೆ .. ಬರಸಿಡಿಲಂತೆ ಬಂದೆರಗಿದ್ದು ನೀವು ಬೇರೆ ಊರಿಗೆ ವರ್ಗಾವಣೆಯಾಗಿ ಹೋಗ್ತೀರಿ ಅನ್ನೊ ಕೆಟ್ಟ ಸುದ್ದಿ … ಅದೂ ಆರನೇ ತರಗತಿಯಲ್ಲಿದ್ದಾಗ … ನಾವೆಷ್ಟು ಕಣ್ಣೀರು ಹಾಕಿದ್ವಿ ಆಗ … ನಾವೀರೊವರೆಗಾದ್ರೂ ನೀವಿರಬೇಕು ಅನ್ನೊ ಆಸೆ ಇತ್ತು … ಯಾಕೆಂದರೆ ಅದು ಹಿರಿಯ ಪ್ರಾಥಮಿಕ …ಏಳನೇ ತರಗತಿ ವರೆಗೆ ಮಾತ್ರ ಇದ್ದುದ್ದು … ನಾವು ಇನ್ನೂ ಒಂದು ವರ್ಷ ಅಲ್ಲೇ ಕಲಿಯೋದಿತ್ತು …ಆದರೆ ನಿಮ್ಮ ಅನುಪಸ್ಥಿತಿ ಸಹಿಸೋದು ಸಾಧ್ಯನಾ….ಕೊನೆ ಪ್ರಯತ್ನ ಎಂಬಂತೆ ನಿಮ್ಮ ಭೇಟಿ ಯಾಗಿ ನೀವು ಹೋಗಬಾರದು ಎಂದು ನಿಮ್ಗೆ ದುಂಬಾಲು ಬಿದ್ದೆವು …. ನಮ್ಮ ಪುಣ್ಯವೋ ಏನೋ ಆ ವರ್ಷ ನೀವಲ್ಲೇ ಉಳಿಯೊ ಹಾಗಾಯಿತು … ನಾವೆಷ್ಟು ಖುಷಿ ಪಟ್ಟಿದ್ದೆವು ಆಗ… ಅಂತು ಇಂತೂ ಶಾಲೆ ಬಿಟ್ಟು ಚದುರಿಯೂ ಆಯ್ತು ಎಲ್ಲರೂ… ಆಮೇಲೆ ನೀವೆಲ್ಲಿ ಇದ್ದೀರಿ ಅನ್ನೋ ಸಣ್ಣ ಸುಳಿವೂ ಇಲ್ಲ …. … ನನ್ನ ಜೀವನದಲ್ಲಿ ನಿಮ್ಮ ನೋಡೋ ಸೌಭಾಗ್ಯ ಮತ್ತೆ ಸಿಗತ್ತಾ … ಈಗ ನೀವು ನಿವೃತ್ತಿ ಹಂತದಲ್ಲೂ ಇರಬಹುದೇನೋ…. ಮೋಡಿ ಮಾಡಿದ ನಿಮ್ಮ ಹೇಗೆ ಮರೆಯಲಿ…. ಮುಂದಿನ ಜನ್ಮ ಅಂತಿದ್ದರೆ ಮತ್ತೆ ನೀವು ನನ್ನ ಗುರುಗಳಾಗೇ ಇರಿ …ಈ ಜನ್ಮದಲ್ಲಿ ನಿಮ್ಮ ಜೊತೆ ಕೆಲಸ ಮಾಡಬೇಕು ಅನ್ನೊ ಆಸೆ ಮುಂದಿನ ಜನ್ಮದಲ್ಲಾದರೂ ನೆರವೇರಲಿ …ಸರ್ ನೀವು ಎಲ್ಲೇ ಇರಿ …ಆದರೆ ತುಂಬಾ ಚೆನ್ನಾಗಿರಿ… ದೇವರು ನಿಮಗೆ ಆರೋಗ್ಯ ಐಶ್ಚ್ವರ್ಯ …ನೆಮ್ಮದಿ ಕೊಟ್ಟು ರಕ್ಷೆ ನೀಡಲಿ ಅನ್ನೋ ಹಾರೈಕೆ …. ಮಿಸ್ ಯೂ ಸರ್ …ಲವ್ ಯೂ ಬೆಳಿಯಪ್ಪ ಗೌಡ ಸರ್ ….

( ಆದರೆ ಒಂದು ಖುಷಿಯ ಸಂಗತಿ ಅಂದರೆ ಹಲವು ಶಿಕ್ಷಕ ರತ್ನರ ಸಹಾಯದಿಂದ ನನ್ನ ಆಸೆ ನೆರವೇರಿದೆ ..ನಾನು ಸರ್ ಜೊತೆ ಮಾತಾಡಿದೆ ….ಅವರು ಸದರಿ ಸ.ಹಿ .ಪ್ರಾ ಶಾಲೆ ಮಡ್ನೂರು ಮರ್ಕಂಜ …ಸುಳ್ಯ ತಾಲೂಕು ಇಲ್ಲಿ ಕಾರ್ಯ ನಿರ್ವಹಿಸ್ತಾ ಇದ್ದಾರೆ .)

ಖುಷಿ ನಾಗರಾಜ್ ಬಾನಮೂಲೆ