ನನ್ನ ವೃತ್ತಿ… ನನ್ನ ಹೆಮ್ಮೆ…

0

ಪ್ರತಿದಿನವೂ ಹೊಸತನದ ಅನುಭವ

ಮಮತಾ ಎ.

ನನ್ನ ವೃತ್ತಿ ನನ್ನ ಹೆಮ್ಮೆ ನೂರಕ್ಕೆ ನೂರರಷ್ಟು ಈ ಸಾಲು ಸತ್ಯ. ಮನಸ್ಸಿನಲ್ಲಿ ಎಷ್ಟೇ ಕಷ್ಟ ಸಂಕಟಗಳು ಇದ್ದರೂ ತರಗತಿಯೊಳಗೆ ಪ್ರವೇಶಿಸಿದಾಗ ಅವೆಲ್ಲವೂ ಕೂಡ ಶೂನ್ಯವಾಗಿ ಬಿಡುತ್ತದೆ. ಪ್ರತಿದಿನ ಕೂಡ ಹೊಸದಾಗಿರುತ್ತದೆ.’ಹೊಸತನ’ ಎಂಬ ಅಪಾರ ಸಂಪತ್ತನ್ನು ನಾವು ಗಳಿಸುತ್ತಾ ಮುಂದೆ ಸಾಗಲು ಈ ವೃತ್ತಿಯಲ್ಲಿದ್ದಷ್ಟು ಅವಕಾಶಗಳು ಬೇರೊಂದು ವೃತ್ತಿಯಲ್ಲಿ ಸಿಗುವುದು ಅಪರೂಪ. ಯಾವುದೇ ಕೆಲಸ ಅಥವಾ ವೃತ್ತಿಯೇ ಇರಲಿ ನಾವು ಮನಸಾರೆ ಪ್ರೀತಿಯಿಂದ ಅದರಲ್ಲಿ ತೊಡಗಿಸಿ ಕೊಂಡಾಗ ಮಾತ್ರ ನಾವು ಮಾಡುವ ವೃತ್ತಿಯಲ್ಲಿ ಸಂತೃಪ್ತಿಯನ್ನು ಕಾಣಲು ಸಾಧ್ಯ. ಗಳಿಸಿದ ಸಂಪತ್ತನ್ನು ಕದಿಯ ಬಹುದು ಆದರೆ ಕಲಿತ ವಿದ್ಯೆಯನ್ನು ಕದಿಯಲಾಗದು. ವೃತ್ತಿಯಲ್ಲಿ ನಾವು ಶಿಕ್ಷಕರಾಗಿದ್ದರು ಸದಾ ವಿದ್ಯಾರ್ಥಿಯಂತೆ ಹೊಸದನ್ನು ಕಲಿಯುತ್ತಾ ಇರಬೇಕು. ಆದ್ದರಿಂದ ನಮ್ಮ ಜ್ಞಾನವನ್ನು ವೃದ್ಧಿಸುತ್ತಾ ಮುಂದಿನ ಪ್ರಜೆಗಳನ್ನು ರೂಪಿಸುವಲ್ಲಿ ನಮ್ಮ ನಿಸ್ವಾರ್ಥ ಸೇವೆಯನ್ನು ಮಾಡುವಲ್ಲಿ ಭಗವಂತನ ಆಶೀರ್ವಾದ ಸದಾ ಇರಲಿ ಎಂದು ಪ್ರಾರ್ಥಿಸೋಣ. ನನ್ನ ಎಲ್ಲ ಗುರು ವೃಂದದವರಿಗೆ ಹಾಗೂ ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಂಡ ಸಮಸ್ತರಿಗೂ ಶಿಕ್ಷಕ ದಿನಾಚರಣೆಯ ಶುಭಾಶಯಗಳು.

ಮಮತಾ ಎ
ಸಹ ಶಿಕ್ಷಕಿ, ಸಂತ ಜೋಸೆಫರ
ಆಂಗ್ಲ ಮಾಧ್ಯಮ ಶಾಲೆ ಸುಳ್ಯ