ಅಜ್ಜಾವರ ಗ್ರಾಮದ ಮುಳ್ಯ -ಅಟ್ಲೂರು ಜನಮಿತ್ರ ಯುವ ಸೇವಾ ಸಂಘ ಮತ್ತು ಯುವ ಕೇಸರಿ ಬಳಗದ ವತಿಯಿಂದ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನಾಚರಣೆ ಅಂಗವಾಗಿ ಸುಳ್ಯದಲ್ಲಿ ಸೆ.16 ರಂದು ನಡೆಯುವ 10 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಕರಪತ್ರ ಹಂಚಿಕೆ ಮತ್ತು ಊರದಾನಿಗಳಿಂದ ಸುಮಾರು13000 ರೂ.ಗಳನ್ನು ಸಂಗ್ರಹಿಸಿ ಯುವ ಕೇಸರಿ ಬಳಗ ಮುಖ್ಯ ತಂಡಕ್ಕೆ ಟೀ ಶರ್ಟ್ ಹಸ್ತಾಂತರ ಕಾರ್ಯಕ್ರಮ ಸೆ.3 ರಂದು ಮುಳ್ಯ ಅಟ್ಲೂರು ಭಜನಾ ಮಂದಿರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಊರಿನ ಹಿರಿಯರಾದ ರುದ್ರಪ್ಪ ಗೌಡ , ವೆಂಕಟ್ರಮಣ ಮುಳ್ಯ, ಸಂಜೀವ ಶೆಟ್ಟಿ ಮುಳ್ಯ, ವಿಶ್ವನಾಥ ಮುಳ್ಯಮಠ, ಲಕ್ಷ್ಮಣ ಗೌಡ ನಡುಬೆಟ್ಟು, ಪುರುಷೋತ್ತಮ ನಡುಬೆಟ್ಟು, ಜಯರಾಮ ನಡುಬೆಟ್ಟು, ಭಜನಾ ಮಂದಿರದ ಅಧ್ಯಕ್ಷ ಧರ್ಮಪಾಲ ನಡುಬೆಟ್ಟು, ಸುಂದರ ನಾಯಕ್, ವೆಂಕಟ್ರಮಣ ಭಟ್, ಹರಿಪ್ರಕಾಶ್ ಮುಳ್ಯ, ಜನಮಿತ್ರ ಯುವ ಸೇವಾ ಸಂಘ ಮತ್ತು ಯುವ ಕೇಸರಿ ಬಳಗ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದರು. ದೇವಿಪ್ರಸಾದ್ ಅತ್ಯಾಡಿ ಕಾರ್ಯಕ್ರಮ ನಿರೂಪಿಸಿದರು.