ಗೋಕುಲಂ ಮಳಿಗೆಯಲ್ಲಿ ಗೋಕುಲಾಷ್ಠಮಿ ಶ್ರೀ ಕೃಷ್ಣ ವೇಷ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

0

ಸುಳ್ಯ ಗೋಕುಲಂ ಮಕ್ಕಳ ಸಿಧ್ಧ ಉಡುಪುಗಳ ಮಳಿಗೆ ಮತ್ತು ಶ್ರೀ ವೆಂಕಟರಮಣ ದೇವ ಮಂದಿರ ಅಂಬಟೆಡ್ಕ ಸುಳ್ಯ ಇದರ ಸಹಯೋಗದಲ್ಲಿ ಗೋಕುಲಂ ಗೋಕುಲಾಷ್ಠಮಿ ಶ್ರೀ ಕೃಷ್ಣ ವೇಷ ಸ್ಪರ್ಧೆಯನ್ನು ಆ.27 ರಂದು ಶ್ರೀ ಶ್ರೀನಿವಾಸ ಪದ್ಮಾವತಿ ಸಭಾಭವನದಲ್ಲಿ ಆಯೋಜಿಸಲಾಗಿದ್ದು

ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಗೋಕುಲಂ ಮಳಿಗೆಯಲ್ಲಿ ಸೆ.5 ರಂದು ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸ್ನೇಹ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಶ್ರೀಮತಿ ಸವಿತಾ ರವರು ಮಾತನಾಡಿ” ಮಕ್ಕಳಿಗೆ ಶ್ರೀ ಕೃಷ್ಣ ಪರಮಾತ್ಮನ ವೇಷ ತೊಡಿಸಿ ಧರ್ಮದ ಅರಿವಿನ ಹಾಗೂ ಧರ್ಮ ರಕ್ಷಣೆಯಲ್ಲಿ ತೊಡಗಿಸಿಕೊಳ್ಳಲು ಇಂತಹ ಸ್ಪರ್ಧೆಯು ಪ್ರೇರಣೆಯಾಗಲಿ ಎಂಬ ಸಂದೇಶ ನೀಡಿ ಸ್ಪರ್ಧೆಯ
ವಿಜೇತರಿಗೆ ಬಹುಮಾನ ವಿತರಿಸಿದರು.

ಮಳಿಗೆಯ ಪಾಲುದಾರ ಚಿದಾನಂದ ವಿದ್ಯಾನಗರ ರವರು ಮಾತನಾಡಿ “ವ್ಯಾಪಾರ ವ್ಯವಹಾರದ ದೃಷ್ಟಿಯಿಂದ ಮಾತ್ರಸ್ಪರ್ಧೆ ನಡೆಸುವುದಲ್ಲ.ಹಬ್ಬ ಹರಿದಿನಗಳ ಮಹತ್ವವನ್ನು ಜಗತ್ತಿಗೆ ಸಾರುವ ಉದ್ದೇಶವನ್ನು ಇರಿಸಿಕೊಂಡು ಇಂತಹ ವಿಶೇಷ ಸ್ಪರ್ಧೆಯನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪಾಲುದಾರ ಅನೂಪ್ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಮುದ್ದು ಕೃಷ್ಣ ವೇಷ 1-3 ವರ್ಷದೊಳಗಿನ ಸ್ಪರ್ಧೆಯ ಫಲಿತಾಂಶ ಹಂಶಿ ದೇವರಗುಂಡ ಪ್ರಥಮ,
ದೀಪಾಂಶಿ ವಿಕಾಸ್ ದ್ವಿತೀಯ,
ಕೃತಿ ತೃತೀಯ,
3 ರಿಂದ 5 ವರ್ಷದೊಳಗಿನ ಸ್ಪರ್ಧೆಯಲ್ಲಿ ಪ್ರಥಮ ಹವೀಶ್ ಕೆ,

ಆಶ್ಮಿಕ ದ್ವಿತೀಯ,
ಶ್ಲೋಕ ತೃತೀಯ,
ರಾಧಾ ಕೃಷ್ಣ ವೇಷ ಸ್ಪರ್ಧೆಯಲ್ಲಿ ಪ್ರಥಮ ತಾನಿಖಾ ಕೆ.ಆರ್- ತಾನಿಯಾ ಕೆ.ಆರ್ ,
ಮಾನ್ವಿ- ಕೃತಿ ಶೋಭಾ ದ್ವಿತೀಯ,

ತ್ರಿಷಾನಾ -ಆರುಷ್ ಕೋಲ್ಚಾರು ತೃತೀಯ,
ಕೃಷ್ಣ-ಯಶೋಧ ಸ್ಪರ್ಧೆಯಲ್ಲಿ ಪ್ರಥಮ
ಶ್ರೀ ಪ್ರಸಾದ್-ಭಾಗ್ಯಶ್ರೀ , ಶ್ಲಾಘ -ಪ್ರತೀಕ್ಷಾ ದ್ವಿತೀಯ,

ಆರುಷ್ ಕೋಲ್ಚಾರು- ನವ್ಯ ತೃತೀಯ ಬಹುಮಾನ ಹಾಗೂ ಗಿಫ್ಟ್ ವೋಚರ್ ಪಡೆದುಕೊಂಡರು.
ಮಕ್ಕಳು ಹಾಗೂ ಪೋಷಕರು ಮತ್ತು ಸಂಸ್ಥೆಯ ಪಾಲುದಾರರು ಉಪಸ್ಥಿತರಿದ್ದರು.
ಸಿಬ್ಬಂದಿ ವರ್ಗದವರು ಸಹಕರಿಸಿದರು.