ಯೇನೆಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ತಾಲೂಕಿನ ದ್ವಿತೀಯ ಉತ್ತಮ ಸಂಘ ಪ್ರಶಸ್ತಿ

0

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರು ಇದರ 37ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಮಹಾಸಭೆಯಲ್ಲಿ ಯೇನೆಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ 2022-23ನೇ ಸಾಲಿನ ಒಕ್ಕೂಟದ ಸುಳ್ಯ ತಾಲೂಕಿನ ದ್ವಿತೀಯ ಉತ್ತಮ ಸಂಘ ವೆಂದು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ದ. ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ಕೆ.ಪಿ ಸುಚರಿತಶೆಟ್ಟಿ, ಯೇನೆಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಭರತ್ ನಕ್ರಾಜೆ, ಕಾರ್ಯದರ್ಶಿ ಗೀತಾ ಡಿ, ಉಪಾಧ್ಯಕ್ಷರಾದ ಸುರೇಶ್ ಬಾಲಾಡಿ, ನಿರ್ದೇಶಕರಾದ ದೇವಿ ಕೃಪಾ ಪರಮಲೆ ಪ್ರಶಸ್ತಿಯನ್ನು ಸ್ವೀಕರಿಸಿದರು.