ಅಜ್ಜಾವರ, ದೇವಚಳ್ಳ, ಅರಂತೋಡು ಗ್ರಾ.ಪಂ. ವ್ಯಾಪ್ತಿಯಲ್ಲಿ ರೇಬಿಸ್ ರೋಗ ನಿರೋಧಕ ಲಸಿಕೆ ಅಭಿಯಾನ

0

ಅಜ್ಜಾವರ ದೇವಚಳ್ಳ ಮತ್ತು ಅರಂತೋಡು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಾಯಿಗಳಿಗೆ ರೇಬಿಸ್ ರೋಗನಿರೋಧಕ ಲಸಿಕೆಯನ್ನು ಉಚಿತವಾಗಿ ಹಾಕಲಾಯಿತು.

ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 80, ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 75 ಮತ್ತು ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 177 ಸಾಕು ನಾಯಿಗಳಿಗೆ ಉಚಿತವಾಗಿ ಹುಚ್ಚುನಾಯಿ ರೋಗ ನಿರೋಧಕ ಲಸಿಕೆ ಹಾಕಲಾಯಿತು ಕಾರ್ಯಕ್ರಮದಲ್ಲಿ

ಡಾ. ವೆಂಕಟಾಚಲಪತಿ ಮುಖ್ಯ ಪಶು ವೈದ್ಯಾಧಿಕಾರಿ ಗುತ್ತಿಗಾರು, ಪುಷ್ಪರಾಜ ಶೆಟ್ಟಿ ಜಾನುವಾರು ಅಭಿವೃದ್ಧಿ ಅಧಿಕಾರಿ ಸುಳ್ಯ, ಪಾಲಾಕ್ಷ ಪಶುವೈದ್ಯ ಪರೀಕ್ಷಕರು ಅರಂತೋಡು ಡಿ ದರ್ಜೆ ನೌಕರರಾದ ಹರೀಶ ಮತ್ತು ಮೋಕ್ಷಿತ್ ಹಾಗೂ

ಅರೆ ತಾಂತ್ರಿಕ ಸಿಬ್ಬಂದಿಯಾದ ಸಾಗರ್ ಭಾಗವಹಿಸಿದ್ದರು. ಅಜ್ಜಾವರ ದೇವಚಳ್ಳ ಮತ್ತು ಅರಂತೋಡು ಗ್ರಾಮ ಪಂಚಾಯತಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಹಕಾರ ನೀಡಿದವು.