ಕಲಾಮಾಯೆ (ರಿ) ಏನೆಕಲ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಎರಡನೇ ವರ್ಷದ ಪುಟಾಣಿಗಳ ಶ್ರೀ ಕೃಷ್ಣ ವೇಷ ಸ್ಪರ್ಧೆ ಸೆ.6 ರಂದು ಶ್ರೀ ಆದಿಶಕ್ತಿ ಭಜನಾ ಮಂದಿರ (ರಿ) ಬಾಲಡಿ ಇಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಆದಿಶಕ್ತಿ ಭಜನಾ ಮಂದಿರದ ಅಧ್ಯಕ್ಷರಾದ ಶ್ರೀ ಗಿರಿಯಪ್ಪ ಗೌಡ ಬಾಲಾಡಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಶಂಖ ಪಾಲ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಮತ್ತು ಉಳ್ಳಾಲ್ತಿ ಉಲ್ಲಾಕುಲು ದೈವಸ್ಥಾನ ಇದರ ಕಾರ್ಯದರ್ಶಿಗಳಾದ ಶ್ರೀ ಕುಮಾರ್ ಪುರ್ಲುಪ್ಪಾಡಿ,
ಸಂಘಟಕರು, ಯಕ್ಷಗಾನ ಗುರುಗಳು ಹಾಗು ಶ್ರೀ ಕನಿಲ ನಾಟಿ ವೈದ್ಯರಾದ ಶ್ರೀ ಶ್ರೀನಿವಾಸ್ ಮುಗುಲಿ,
ಸ್ಪರ್ಧಾ ತೀರ್ಪುಗಾರರು ಹಾಗು
ಸಾಮಾಜಿಕ ಕಾರ್ಯಕರ್ತರು, ಸಾಮರಸ್ಯ ವಿಭಾಗದ ಸುಳ್ಯ ತಾಲೂಕಿನ ತಾಲೂಕು ಸoಯೋಜಕರಾದ ಶ್ರೀ ಕುಮಾರ್ ಬಿಲದ್ವಾರ, ಯಕ್ಷಗಾನ ಕಲಾವಿದರಾದ ಮಿಥುಲ್ ಪಂಜ,
ಆದಿಶಕ್ತಿ ಭಜನಾ ಮಂದಿರದ ಹಿರಿಯ ಸದಸ್ಯರಾದ ಶ್ರೀಮತಿ ಪುಷ್ಪಾವತಿ ಗಿರಿಯಪ್ಪ ಗೌಡ ವೇದಿಕೆಯಲ್ಲಿ ಹಾಜರಿದ್ದರು.
ಅಶೋಕ್ ಅಂಬೇಕಲ್ಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಸಚಿನ್ ಕುಕ್ಕಪ್ಪನ ಮನೆ ಸಹಕರಿಸಿದರು. ಎಲ್ಲಾ ಪೋಷಕರ ಪ್ರೋತ್ಸಾಹದೊಂದಿಗೆ ಪುಟಾಣಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.