ಶ್ರೀಕೃಷ್ಣ ಸೇವಾ ಸಮಿತಿ ಬಾಳಿಲ ಮುಪ್ಪೇರ್ಯ ಇದರ ಆಶ್ರಯದಲ್ಲಿ ಬಾಳಿಲ ಅಂಗನವಾಡಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ ನಡೆಯಿತು.
ಪುಟಾಣಿ ಮಕ್ಕಳು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಗೀತಾಜ್ಞಾನಯಜ್ಞ ತಂಡ ಬಾಳಿಲದವರಿಂದ ಭಗವದ್ಗೀತಾ ಪಾರಾಯಣ ನಡೆಯಿತು.
ಬಾಳಿಲ ಗ್ರಾ. ಪಂ. ಅಧ್ಯಕ್ಷೆ ಪಾವನಾ ಜೋಗುಬೆಟ್ಟು, ಸದಸ್ಯರಾದ ತ್ರಿವೇಣಿ ವಿಶ್ರೇಶ್ವರ ಪುರೋಹಿತ್, ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಶಶಿಕಲಾ ಚಾಕೊಟೆಡ್ಕ, ಶ್ರೀಕೃಷ್ಣ ಸೇವಾ ಸಮಿತಿಯ ಅಧ್ಯಕ್ಷೆ ಪುಷ್ಪಾವತಿ ಗಣೇಶ್ ವೇದಿಕೆಯಲ್ಲಿ ಉಪಸ್ಥಿತಿತರಿದ್ದರು.
ಶ್ರೀಕೃಷ್ಣ ಜನ್ಮಾಷ್ಠಮಿಯ ವಿಶೇಷತೆ ಬಗ್ಗೆ ತ್ರಿವೇಣಿ ವಿಶ್ವೇಶ್ವರ ಪುರೋಹಿತ್ ಮಾತನಾಡಿದರು.
ಮಕ್ಕಳ ಶ್ರೀಕೃಷ್ಣ ವೇಷದ ಸ್ಪರ್ಧೆ, ಭಗವದ್ಗೀತೆಯ ಧ್ಯಾನ ಶ್ಲೋಕಗಳ ಕಂಠಪಾಟ ಸ್ಪರ್ಧೆ ನಡೆಯಿತು. ಪುಟಾಣಿ ಶ್ರೀಕೃಷ್ಣ ರಾಧೆಯ ಹಾಡು, ನೃತ್ಯಗಳು ನಡೆಯಿತು. ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಬಾಳಿಲ ಅಂಗನವಾಡಿ ಕಾರ್ಯಕರ್ತೆ ದಯಾನಂದಿನಿ ಸ್ವಾಗತಿಸಿದರು. ಜಾಹ್ನವಿ ಕಾಂಚೋಡು ಕಾರ್ಯಕ್ರಮ ನಿರೂಪಿಸಿದರು. ಸೇವಾ ಸಮಿತಿಯ ಸದಸ್ಯರು, ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.