ನೆಲ್ಲೂರು ಕೆಮ್ರಾಜೆಯ ಎಲಿಮಲೆಯ ನಿವಾಸಿ ಪ್ರಸ್ತುತ ಕೇರಳದ ಕಣ್ಣೂರು ಏರ್ ಪೋರ್ಟ್ ನಲ್ಲಿ ಎ.ಎಸ್.ಐ ಹುದ್ದೆಯಲ್ಲಿರುವ ಹೇಮಕುಮಾರ್ ಚಿತ್ತಡ್ಕ ಮತ್ತು ಹರಿಣಿ ಹೇಮಕುಮಾರ್ ರವರ ವೈವಾಹಿಕ ಜೀವನದ 25 ರ ಬೆಳ್ಳಿ ಹಬ್ಬದ ಕಾರ್ಯಕ್ರಮವು ಆ.27 ರಂದು ಸುಳ್ಯದ ಅಂಬಟೆಡ್ಕ ಗಿರಿದರ್ಶಿನಿ ಸಭಾಭವನದಲ್ಲಿ ಸಂಭ್ರಮದಿಂದ ನಡೆಯಿತು.
ಹಿರಿಯರಾದ ಪುರುಷೋತ್ತಮ ಚಿತ್ತಡ್ಕ ರವರು ದೀಪ ಬೆಳಗಿಸಿದರು.
ಈ ಸಂದರ್ಭದಲ್ಲಿ ಆಗಮಿಸಿದ ಕುಟುಂಬಸ್ಥರು ಹಾಗೂ ಬಂಧು ಮಿತ್ರರು ದಂಪತಿಗೆ ಶುಭ ಹಾರೈಸಿದರು.
ವೇಣುಗೋಪಾಲ ಚಿತ್ತಡ್ಕ ಪ್ರಾರ್ಥಿಸಿದರು. ನವೀನ್ ಗೇರುಕಟ್ಟೆ ಸ್ವಾಗತಿಸಿದರು. ಕಿರಣ್ ಗುಡ್ಡೆಮನೆ ಅಭಿನಂದನಾ ಮಾತುಗಳನ್ನಾಡಿದರು.
ಪುತ್ರ ವಿನೀತ್ ಚಿತ್ತಡ್ಕ ಮತ್ತು ಪುತ್ರಿ ಕು.ಕೃತಿ ಸಿ.ಹೆಚ್. ಕಾರ್ಯಕ್ರಮ ನಿರ್ವಹಿಸಿದರು. ಆಗಮಿಸಿದ ಎಲ್ಲರಿಗೂ ಸಹಭೋಜನದ ವ್ಯವಸ್ಥೆ ಮಾಡಲಾಗಿತ್ತು.