ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಾಯಿಗಳಿಗೆ ರೇಬಿಸ್ ರೋಗನಿರೋಧಕ ಲಸಿಕೆಯನ್ನು ಇಂದು ಉಚಿತವಾಗಿ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ನಾಗಪಟ್ಟಣ, ಮಿತ್ತಡ್ಕ, ಆಲೆಟ್ಟಿ, ಮೊರಂಗಲ್ಲು, ಎಲಿಕ್ಕಳ, ಗುತ್ತಿನಡ್ಕ, ಪಿಂಡಿಬನ, ಬಡ್ಡಡ್ಕ, ಆಡಿಂಜ, ಎತ್ತರಡ್ಕ, ಕೂರ್ನಡ್ಕ,
ನಾರ್ಕೋಡು,ಕಲ್ಲೆಂಬಿ, ಏಣಾವರ, ಬಾರ್ಪಣೆ, ಆನೆಕಲ್ಲು, ಬಿಲ್ಲರ ಮಜಲು, ಕುಂಭಕೋಡು, ಕೊಲ್ಲರಮೂಲೆ, ಕೋಲ್ಚಾರು, ಕಣಕ್ಕೂರು, ಕೂಳಿಯಡ್ಕ, ಪೈಂಬೆಚ್ಚಾಲು ಭಾಗದಲ್ಲಿ ಸಾಕು ನಾಯಿಗಳಿಗೆ ಉಚಿತವಾಗಿ ಹುಚ್ಚುನಾಯಿ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಡಾ. ನಿತಿನ್ ಪ್ರಭು, ಅಧಿಕಾರಿ ಪುಷ್ಪರಾಜ್ ಶೆಟ್ಟಿ, ಪರೀಕ್ಷಕ ದೇವರಾಜ್,ಸಿಬ್ಬಂದಿ ಹರೀಶ್ , ನವೀನ್ ಹಾಗೂ ಪಂಚಾಯತ್ ಅಧ್ಯಕ್ಷೆ ವೀಣಾಕುಮಾರಿ ಆಲೆಟ್ಟಿ, ಉಪಾಧ್ಯಕ್ಷೆ ಕಮಲ ನಾಗಪಟ್ಟಣ, ಸದಸ್ಯೆ ಮೀನಾಕ್ಷಿ ಕುಡೆಕಲ್ಲು ಮತ್ತಿತರರು ಉಪಸ್ಥಿತರಿದ್ದರು.
ಪಿ.ಡಿ.ಒ ಸೃಜನ್ ಎ.ಜಿ ಮತ್ತು ಪಂಚಾಯತ್ ಸಿಬ್ಬಂದಿ ವರ್ಗದವರು ಜತೆಯಲ್ಲಿದ್ದರು.