ಕಳಂಜ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಂಘ, ಉತ್ತಮ ಕಾರ್ಯದರ್ಶಿ ಪ್ರಶಸ್ತಿ

0

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರು ಇದರ 37ನೇ ವಾರ್ಷಿಕ ಮಹಾಸಭೆಯಲ್ಲಿ ಕಳಂಜ ಹಾಲು ಉತ್ಪಾದಕರ ಸಹಕಾರಿ ಸಂಫಕ್ಕೆ 2022-2023 ನೇ ಸಾಲಿನ ಸುಳ್ಯ ತಾಲೂಕಿನ ಉತ್ತಮ ಸಂಘವೆಂದು ಪ್ರಶಸ್ತಿ ಹಾಗೂ ಉತ್ತಮ ಕಾರ್ಯದರ್ಶಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಪ್ರಶಸ್ತಿಯನ್ನು ಒಕ್ಕೂಟದ ಅಧ್ಯಕ್ಷ ಕೆ ಪಿ. ಸುಚರಿತ ಶೆಟ್ಟಿ ಅವರು ನೀಡಿ ಸನ್ಮಾನಿಸಿದರು.

ಕಳಂಜ ಹಾಲು ಸೊಸೈಟಿ ಯ ಅಧ್ಯಕ್ಷರಾದ ಸುಧೀರ್ ರುಕ್ಮಯ್ಯ ಗೌಡ ಕಳಂಜ ಮತ್ತು ಕಾರ್ಯದರ್ಶಿಗಳಾದ ಮೋನಪ್ಪ ಮಣಿಮಜಲು ಪ್ರಶಸ್ತಿ ಸ್ವೀಕರಿಸಿದರು.