ಮಹಿಳೆಯರ ಅತ್ಮಸ್ಥೇರ್ಯ ಹಿಂದೆಗಿಂತಲೂ ಈದೀಗ ಸಾಕಷ್ಟು ಹೆಚ್ಚಿದೆ – ಡಾ|| ರೇವತಿ ನಂದನ್,

0

೬೦ ವರ್ಷಗಳ ಹಿಂದೆ ಹೆಣ್ಣು ಮಗಳೊಬ್ಬಳು ಶಿಕ್ಷಣ ಪಡೆಯುವುದುಅಸಾದ್ಯವಾಗಿತ್ತು, ವೈಯಕ್ತಿವಾಗಿ, ಶಿಕ್ಷಣ, ಅರೋಗ್ಯ, ಸಾಮಾಜಿಕ ವ್ಯವಸ್ಥೆ ಮಹಿಳಾ ಪರವಾಗಿಇರಲಿಲ್ಲ, ಅತ್ಯಂತಕಷ್ಟದ ದಿನಗಳಲ್ಲಿ ಜೀವನ ನಡೆಸುತ್ತಿದ್ದರು.ಅದರೆ ಈದೀಗ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಾಧನೆಯನ್ನು ಸಾಧಿಸುತ್ತಿದ್ದಾರೆ.ಗ್ರಾಮ ಮಟ್ಟದಲ್ಲಿ ಸ್ವ-ಸಹಾಯಸಂಘಗಳ ಮೂಲಕ ಅತ್ಯುತ್ತಮಅರ್ಥಿಕಚಟುವಟಿಕೆಯನ್ನು ಹೊಂದುತ್ತ , ಶಿಕ್ಷಣ, ಸಾಮಾಜಿಕ ಭದ್ರತೆ, ಉದ್ಯೋಗ ಗಳತ್ತ ಮುನ್ನುಗುತ್ತಿರುವುದುತುಂಬಾ ಸಂತೋಷದ ವಿಚಾರಎಂದೂ ನಿವೃತ್ತ ಪ್ರಾಂಶುಪಾಲರು ಶಾರದ ಮಹಿಳಾ ವಿದ್ಯಾಸಂಸ್ಥೆಗಳ ಸಂಚಾಲಕರೂಆಗಿರುವಡಾ|| ರೇವತಿ ನಂದನ್‌ರವರು ಹೇಳಿದರು.

ಸುಳ್ಯನಗರ ಜಟ್ಟಿಪಳ್ಳದ ಮಾನಸ ಮಹಿಳಾ ಮಂಡಲದಲ್ಲಿ ನಡೆದ ವಾರ್ಷಿಕ ಮಹಾಸಭೆ ಮತ್ತು ಪದಗ್ರಹಣ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತಾಡುತ್ತಿದ್ದರು. ವಾರ್ಷಿಕ ಮಹಾಸಭೆಯಅದ್ಯಕ್ಷತೆಯನ್ನು ಮಹಿಳಾ ಮಂಡಲದಅದ್ಯೆಕ್ಷಿ ಶ್ರೀಮತಿ ರೇವತಿ ಗೋಪಾಲ ರವರು ವಹಿಸಿದ್ದರು, ಮುಖ್ಯಅತಿಥಿಯಾಗಿ ಸುಳ್ಯ ಮಹಿಳಾ ಮತ್ತು ಮಕ್ಕಳ ಅಭಿವೃಧಿಅಧಿಕಾರಿ ಶ್ರೀಮತಿ ಶೈಲಜಾ ದಿನೇಶ್‌ರವರುಇಲಾಖೆಯಿಂದಮಕ್ಕಳಿಗೆ ಮತ್ತು ಮಹಿಳೆಯರಿಗೆ ಸಿಗುವ ಸವಲತ್ತುಗಳು ಮತ್ತು ರಕ್ಷಣೆಗಳ ಬಗ್ಗೆ ವಿವರವಾದ ಮಾಹಿತಿಯನ್ನುನೀಡಿದರು.

ಮಹಿಳಾ ಮಂಡಲದ ನೂತನ ಪಧಾದಿಕಾರಗಳಿಗೆ ಗೌ| ಅದ್ಯೆಕ್ಷೆ ಶ್ರೀಮತಿ ಚಂದ್ರಾಕ್ಷಿಜೆರೈಯವರು ಪ್ರಮಾಣ ವಚನ ಭೋದಿಸಿ ದಾಖಲೆ ಪತ್ರಗಳನ್ನು ಹಸ್ತಾಂತರಿಸಿದರು. ನೂತನಅದ್ಯೆಕ್ಷೆ ಶ್ರೀಮತಿ ಚಿತ್ರಲೇಖ ಮಡಪ್ಪಾಡಿಯವರು ಮಾತಾನಾಡಿ ಬೆಳ್ಳಿ ಹಬ್ಬದಆಚರಣೆಯಲ್ಲಿರುವ ನಮ್ಮ ಮಹಿಳಾ ಮಂಡಲದಿಂದ ಹಲವು ಕಾರ್‍ಯಕ್ರಮಗಳನ್ನು ಸಂಘಟಿಸಲುಎಲ್ಲರ ಸಹಕಾರವನ್ನು ಕೇಳಿಕೊಂಡರು ಇದೇ ಸಂಧರ್ಭದಲ್ಲಿ ‘ಮಾನಸಅಮ್ಮ’ ದತ್ತು ಸ್ಥಿಕಾರ ಯೋಜನೆಯಡಿತಾಯಿಯನ್ನು ಕಳೆದುಕೊಂಡ ೯ ತಿಂಗಳ ಮಗುವನ್ನು ಮಹಿಳಾ ಮಂಡಲದ ವತಿಯಿಂದದತ್ತುಪಡೆದುಉಪಯ್ತಕ ವಸ್ತುಗಳ ‘ಕಿಟ್’ನ್ನು ಹಸ್ತಾಂತರರಿಸಲಾಯಿತು ಮತ್ತು ಮಗುವಿನ ಬೆಳೆವಣಿಗೆ ಬಗ್ಗೆ ಮಹಿಳಾ ಮಂಡಲದಿಂದ ಕಾಲಕಾಲಕ್ಕೆ ಸಹಕಾರ ನೀಡುವುದೆಂದುಅದ್ಯಕ್ಷರು ಘೋಷಿಸಿದರು.

ಮಹಿಳಾ ಮಂಡಲದ ವರದಿಯನ್ನು ಶೈಲಜಾ ಪಿ ರೈಯವನ್ನ ಮಂಡಿಸಿದರೆ ಲೆಕ್ಕ ಪತ್ರವನ್ನು ಪೂರ್ವಾದ್ಯೆಕ್ಷೆ ಸುನೀತಾರಾಮಚಂದ್ರರವರು ಮಂಡಿಸಿದರು. ಕಾರ್‍ಯಕ್ರಮದಲ್ಲಿ ಮಾಜಿಅಧ್ಯಕ್ಷೆ ಹಿರಿಯರಾದಸರೋಜಿನಿ ಮಹಾಬಲ ಗೌಡ,ಗೌರವ ಸಲಹೆಗಾರರಾದ ದಿನೇಶ್ ಮಡಪ್ಪಾಡಿ, ರಮಾನಂಧರೈ, ರಫನಾಥ ಜಟ್ಟಿಪ್ಪಳ, ಸಂತೋಷ್‌ಕುಮಾರ್‌ರೈ ಶೆಟ್ಟಿ, ಹರಿಶ್ಚಂದ್ರಎಂ.ಆರ್, ಅಲ್ಲದೆ ಕಪಿಲ ಯುವಕ ಮಂಡಲದಅದ್ಯಕ್ಷ ಹರೀಶ್, ಪೂರ್ವಾದ್ಯಕ್ಷರಾದ ನವೀನ್‌ಕುಮಾರ್‌ಕಜೆ, ವಿಶುಕುಮಾರ್ ಜಟ್ಟಿಪಳ್ಳ, ಶಾಲಾಭಿವೃಧಿ ಸಮಿತಿಯಅದ್ಯಕ್ಷಉಮೇಶ್ ಬೊಳಿಯಮಜಲು, ಉಪಸ್ಥಿತರದ್ದರು ಕಾರ್‍ಯಕ್ರಮವನ್ನುಉಪನ್ಯಾಸಕಿ ಶ್ರೀಮತಿ ಆರ್ಚನ.ಅರ್.ರೈ ನಿರೂಪಿಸಿದರು.