ರಸ್ತೆ ಜಾಗ ಅತಿಕ್ರಮಣ, ಅಂಗಡಿಗಳು ಪ್ಲಾಟ್ ಫಾರ್ಮ್ ಎಂಟ್ರಿ, ಸಿ.ಸಿ ಕ್ಯಾಮಾರ, ತೆರಿಗೆ ಬಾಕಿ, ಒಳಚರಂಡಿ ಬಗ್ಗೆ, ಕಸ ವಿಲೇವಾರಿ ಬಗ್ಗೆ ಚರ್ಚೆ
ಸುಬ್ರಹ್ಮಣ್ಯದ ಗ್ರಾಮ ಸಭೆಯು ಸುಬ್ರಹ್ಮಣ್ಯದಲ್ಲಿರುವ ರಾಜೀವಗಾಂಧಿ ಸೇವಾಕೇಂದ್ರ ಕಟ್ಟಡದ ಕುಮಾರಧಾರ ಸಭಾಭವನದಲ್ಲಿ ಸೆ.೮ ನಡೆಯಿತು.
ಸಭೆಯಲ್ಲಿ ರಸ್ತೆ ಜಾಗ ಅತಿಕ್ರಮಣ, ಅಂಗಡಿಗಳು ಪ್ಲಾಟ್ ಫಾರ್ಮ್ ಎಂಟ್ರಿ, ಸಿ.ಸಿ ಕ್ಯಾಮಾರ, ತೆರಿಗೆ ಬಾಕಿ, ಒಳಚರಂಡಿ ಬಗ್ಗೆ, ಕಸ ವಿಲೇವಾರಿ ಬಗ್ಗೆ ಚರ್ಚೆ ನಡೆಯಿತು.
ಗ್ರಾ.ಪಂ ನ ಅಧ್ಯಕ್ಷೆ ಸುಜಾತಾ ಕಲ್ಲಾಜೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವೆಂಕಟೇಶ್ ಎಚ್ ಎಲ್, ಸದಸ್ಯರುಗಳಾದ ರಾಜೇಶ್ ಕೆ, ಶ್ರೀಮತಿ ಮಲ್ಲಿಕಾ, ಶ್ರೀಮತಿ ಭಾರತಿ ದಿನೇಶ್, ನಾರಾಯಣ ಅಗ್ರಹಾರ, ಶ್ರೀಮತಿ ದಿವ್ಯ, ರಾಜೇಶ್ ಎನ್ ಎಸ್, ಶ್ರೀಮತಿ ಸವಿತಾ, ಹರೀಶ್ ಇಂಜಾಡಿ, ಶ್ರೀಮತಿ ಸೌಮ್ಯ, ಶ್ರೀಮತಿ ಜಯಂತಿ, ಮೋಹನ ಕೆ, ಶ್ರೀಮತಿ ಶಶಿಕಲಾ, ದಿಲೀಪ್ ಉಪ್ಪಳಿಕೆ, ಶ್ರೀಮತಿ ಭವ್ಯಕುಮಾರಿ ಕೆ, ಶ್ರೀಮತಿ ಪುಷ್ಪಲತಾ, ಗಿರೀಶ್ ಆಚಾರ್ಯ, ಶ್ರೀಮತಿ ಲಲಿತಾ ಗುಂಡಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೋಡೆಲ್ ಅಧಿಕಾರಿಯಾಗಿ ಪಂಚಾಯತ್ ಅಭಿವೃದ್ಧಿ ಇಲಾಖೆ ಪುತ್ತೂರು ಇಲ್ಲಿನ ಭರತ್ ಬಿ.ಎಂ ಇದ್ದರು. ಪಿಡಿಒ ಆಕಾಶ್ ವೇದಿಕೆಯಲ್ಲಿದ್ದರು. ಕಾರ್ಯದರ್ಶಿ ಮೋನಪ್ಪ ಡಿ. ವರದಿ ವಾಚಿಸಿದರು. ಇಲಾಖಾ ಅಧಿಕಾರಿಗಳು ತಮ್ಮ ಇಲಾಖಾ ಮಾಹಿತಿ ನೀಡಿದರು.
ಚರ್ಚೆಯಲ್ಲಿ ಶಿವರಾಮ ರೈ, ಪವನ್ , ಬಾಲಕೃಷ್ಣ ಮರೀಲ್, ವಿಶ್ವನಾಥ ನಡುತೋಟ, ಮೋಹನ್ ದಾಸ್ ರೈ, ರತ್ನ, ಶೇಷಕುಮಾರ್, ಭವಾನಿಶಂಕರ ಪೂಂಬಾಡಿ, ಕಿಶೋರ್ ಕುಮಾರ್ ಕೂಜುಗೋಡು ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.