ಪ್ರಥಮ : ರೆಂಜಾಳ ಶ್ರೀ ಶಾಸ್ತಾವು ದ್ವಿತೀಯ: ಮಿತ್ರ ಬಳಗ ಕಾಯರ್ತೋಡಿ
ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವವು ಸೆ.7ರಂದು ಜರುಗಿದ್ದು , ಈ ಬಾರಿ ವಿಶೇಷ ಆಕರ್ಷಣೆಯಾಗಿ ರಾತ್ರಿ ಗೋಪುರ ಮಡಿಕೆ ಒಡೆಯುವ ಸ್ಪರ್ಧೆ ನಡೆದಿದ್ದು, ರೆಂಜಾಳ ಶ್ರೀ ಶಾಸ್ತಾವು ತಂಡ ಪ್ರಥಮ ಹಾಗೂ ಕಾಯರ್ತೋಡಿ ಮಿತ್ರಬಳಗ ತಂಡವು ದ್ವಿತೀಯ ಬಹುಮಾನ ಪಡೆದುಕೊಂಡಿತು.
ಬೆಳಿಗ್ಗೆ ಶ್ರೀ ಆತ್ಮಾರಾಮ ಭಜನಾ ಮಂದಿರದಲ್ಲಿ ಪೂಜಾ ಕಾರ್ಯಕ್ರಮ, ಬಳಿಕ ಶಾಲಾ -ಕಾಲೇಜಿನ ವಿದ್ಯಾರ್ಥಿಗಳಿಗೆ, ಪುರುಷರಿಗೆ ಮತ್ತು ಮಾತೆಯರಿಗೆ ವಿವಿಧ ಸ್ಪರ್ಧೆಗಳು ಜರುಗಿ,
ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಸ್ಥಳೀಯ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಮಂಗಳಾರತಿ, ಅನ್ನಸಂತರ್ಪಣೆ ಜರುಗಿತು.
ಬಳಿಕ ಸುಳ್ಯದ ಭುವನೇಶ್ವರಿ ಮಕ್ಕಳ ಯಕ್ಷಗಾನ ತಂಡದಿಂದ ಶ್ರೀ ರಾಮಾಶ್ವಮೇಧ ಯಕ್ಷಗಾನ ಜರುಗಿತು.
ರಾತ್ರಿ ನಡೆದ ಗೋಪುರ ಮಡಿಕೆ ಒಡೆಯುವ ಕಾರ್ಯಕ್ರಮದಲ್ಲಿ ಒಟ್ಟು 7 ತಂಡಗಳು ಭಾಗವಹಿಸಿದ್ದವು. ರೆಂಜಾಳ ಶ್ರೀ ಶಾಸ್ತಾವು ತಂಡ ಪ್ರಥಮ, ಮಿತ್ರಬಳಗ ಕಾಯರ್ತೋಡಿ ತಂಡ ದ್ವಿತೀಯ ಬಹುಮಾನ ಪಡೆದುಕೊಂಡವು. ಭಾಗವಹಿಸಿದ ಎಲ್ಲಾ ತಂಡಗಳಿಗೆ ಪ್ರೋತ್ಸಹಕ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಆತ್ಮಾರಾಮ ಭಜನಾ ಮಂದಿರದ ಪದಾಧಿಕಾರಿಗಳು, ಅಷ್ಟಮಿ ಮಹೋತ್ಸವದ ಸಂಯೋಜಕರುಗಳು, ಯುವಕ ಮಂಡಲದ ಪದಾಧಿಕಾರಿಗಳು, ಸ್ವರ್ಣ ಮಹಿಳಾ ಮಂಡಲದ ಪದಾಧಿಕಾರಿಗಳು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.