ಪೈಲಾರು: ಶ್ರೀ ಕೃಷ್ಣಜನ್ಮಾಷ್ಠಮಿ 37 ನೇ ವರ್ಷದ ಮೊಸರು ಕುಡಿಕೆ ಉತ್ಸವ

0

ಭಗವದ್ಗೀತೆಯ ಸಂದೇಶ ಹಾಗೂ ಹರಿ ನಾಮಸ್ಮರಣೆಯನ್ನು ಅನುಸರಿಸಿದರೆ ಜೀವನ ಪರಿಪೂರ್ಣತೆ ಹೊಂದಲು ಸಾಧ್ಯ- ಶಿವಪ್ರಸಾದ್ ಆಲೆಟ್ಟಿ

ಪೈಲಾರು ಮಿತ್ರ ವೃಂದ ಇದರ ಆಶ್ರಯದಲ್ಲಿ 37 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವವು ಸೆ.10 ರಂದು ಪೈಲಾರು ಸರಕಾರಿ ಶಾಲೆಯ ಮೈದಾನದಲ್ಲಿ ನಡೆಯಿತು.

ಬೆಳಗ್ಗೆ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಪೈಲಾರು ಶ್ರೀ ರಾಮ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮದೊಂದಿಗೆ ಆರಂಭಗೊಂಡಿತು.


ಬಳಿಕ ವಿವಿಧ ಆಟೋಟ ಸ್ಪರ್ಧೆಗಳಿಗೆ ಹಿರಿಯರು ಪ್ರಗತಿಪರ ಕೃಷಿಕರಾದ ಹರಿಶ್ಚಂದ್ರ ಮಡಪ್ಪಾಡಿ ಯವರು ಚಾಲನೆ ನೀಡಿದರು.
ಬಳಿಕ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆಯನ್ನು ಹಾಗೂ ಕಾಳು ಹೆಕ್ಕುವುದು,ಕಪ್ಪೆ ಜಿಗಿತ ಸ್ಪರ್ಧೆಆಯೋಜಿಸಲಾಗಿತ್ತು. ಸಾರ್ವಜನಿಕ ಮಹಿಳೆಯರಿಗೆ ಮತ್ತು ಪುರುಷರಿಗಾಗಿ ಎಣ್ಣೆ ಕಂಬದ ಮೇಲೆ ನಡೆಯುವುದು,
ಓಟದ ಸ್ಪರ್ಧೆ, ಮಡಕೆ ಒಡೆಯುವುದು, ಹಗ್ಗ ಜಗ್ಗಾಟ, ಸಂಗೀತ ಕುರ್ಚಿ, ಬೆರ್ಚೆಂಡ್, ನೋಂಡಿ ಹಾಗೂ ವಿಶೇಷವಾಗಿ ಅಡಿಕೆ ಹಾಳೆಯಲ್ಲಿ ಪತಿಯನ್ನು ಕುಳ್ಳಿರಿಸಿ ಪತ್ನಿಯನ್ನು ಎಳೆದುಕೊಂಡು ಹೋಗಿ ಗುರಿ ಮುಟ್ಟುವ ಸ್ಪರ್ಧೆ ಆಕರ್ಷಕವಾಗಿ ಗಮನ ಸೆಳೆಯಿತು.

ಸಂಜೆ ಸಮಾರೋಪ ಸಮಾರಂಭವು
ಮಿತ್ರ ವೃಂದದ ಅಧ್ಯಕ್ಷ ಶಶಿಕಾಂತ್ ಮಿತ್ತೂರು ರವರು ಅಧ್ಯಕ್ಷತೆಯಲ್ಲಿ ನಡೆಯಿತು.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಕುರಿತು ಧಾರ್ಮಿಕ ಉಪನ್ಯಾಸ ನೀಡಿದರು.
ಮುಖ್ಯ ಅಭ್ಯಾಗತರಾಗಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ
ಕು. ಭಾಗೀರಥಿ ಮುರುಳ್ಯ, ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರಾವತಿ, ಪ್ರಗತಿಪರ ಕೃಷಿಕ ಹರಿಶ್ಚಂದ್ರ ಮಡಪ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಸಕಿ ಕು. ಭಾಗೀರಥಿ ಮುರುಳ್ಯ ರವರನ್ನು ಹಾಗೂ ಕಲಾವಿದೆ ವಿದುಷಿ ಜಯಶ್ರೀ ಕುಳ್ಳಂಪಾಡಿ, ಪವರ್ ಮ್ಯಾನ್ ರವೀಂದ್ರ ಕುಚ್ಚಾಲ, ಸಹಾಯಕ ಲೈನ್ ಮ್ಯಾನ್ ದಂಡಪ್ಪ ನಡುವಿನಮನಿಯವರನ್ನು ಸನ್ಮಾನಿಸಲಾಯಿತು.
ಅಷ್ಠಮಿ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಹಮ್ಮಿಕೊಂಡ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಮಿತ್ರ ವೃಂದಕ್ಕೆ ಸ್ವಂತ ಜಾಗ ಮಂಜೂರು ಮಾಡುವಂತೆ ಶಾಸಕಿಯವರಿಗೆ ಮನವಿ ಪತ್ರ ನೀಡಲಾಯಿತು.

ಕೋಶಾಧಿಕಾರಿ ಹರ್ಷಿತ್ ಜಿ.ಜೆ ದಾತಡ್ಕ ಸ್ವಾಗತಿಸಿದರು. ಕಾರ್ಯದರ್ಶಿ ಧನ್ಯರಾಜ್ ಮೂಕಮಲೆ ವರದಿ ವಾಚಿಸಿದರು. ನಿರ್ದೇಶಕ ವಿವೇಕ್ ಪಡ್ಪು ವಂದಿಸಿದರು. ತೀರ್ಥೇಶ್ ಯಾದವ್ ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ಹಿರಿಯ ಕಿರಿಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಮಿತ್ರ ವೃಂದದ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.