ಕಾಂಗ್ರೆಸ್ ಸರಕಾರದಿಂದ ರೈತ ವಿರೋಧ ನೀತಿ : ಸುಳ್ಯದಲ್ಲಿ‌ ಬಿಜೆಪಿ ಪ್ರತಿಭಟನೆ

0

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕಾರ್ಯದರ್ಶಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳ ವಿರುದ್ಧ ಬಿಜೆಪಿ ಮಂಡಲ ಸಮಿತಿ ವಾಗ್ದಾಳಿ

ರಾಜ್ಯದಲ್ಲಿ ಬರ ಘೋಷಿಸುವಂತೆ ನಾಯಕರ ಆಗ್ರಹ

ರಾಜ್ಯ ಸರಕಾರದ ರೈತ ವಿರೋಧ ನೀತಿ, ಜನ ವಿರೋಧಿ ನಿಲುವು ಖಂಡಿಸಿ ರಾಜ್ಯದಲ್ಲಿ ಬರ ಘೋಷಿಸುವಂತೆ ಆಗ್ರಹಿಸಿ ಸುಳ್ಯದಲ್ಲಿ ಬಿಜೆಪಿ ಮಂಡಲ ರೈತ ಮೋರ್ಚಾ ವತಿಯಿಂದ ಪ್ರತಿಭಟನೆ ಸುಳ್ಯ ತಾಲೂಕು ಕಚೇರಿ ಎದುರು ನಡೆಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ “105 ದಿನಗಳಿಂದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿದೆ.5 ಗ್ಯಾರಂಟಿಗಳನ್ನು ನೀಡುತ್ತಾ ಬಂದ ಸರಕಾರ ಇದೀಗ ರೈತ ವಿರೋಧಿ ನೀತಿ ಅಳವಡಿಸಿದೆ. ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 6 ಸಾವಿರದ ಜತೆ ರಾಜ್ಯ 4 ಸಾವಿರ ನೀಡುತ್ತಿತ್ತು. ಅದನ್ನು ಈ ಸರಕಾರ ನಿಲ್ಲಿಸಿದೆ. ರೈತ ವಿದ್ಯಾನಿಧಿ ಯೋಜನೆ ರದ್ದುಗೊಳಿಸಿದೆ. ಎಪಿಎಂಸಿ ಕಾಯ್ದೆ ವಾಪಸ್ ಪಡೆದು ರೈತರಿಗೆ ಅನ್ಯಾಯ ಮಾಡಿದೆ ಎಂದ ಅವರು, ಗ್ಯಾರಂಟಿ ಯೋಜನೆಗಳನ್ನು‌ ಬಿಜೆಪಿ ಕಾರ್ಯಕರ್ತರು ಪಡೆಯುತ್ತಿದ್ದಾರೆಂದು ಬ್ಲಾಕ್ ಕಾಂಗ್ರೆಸ್ ನೀಡಿದ ಹೇಳಿಕೆ ವಿರುದ್ದ ಹರಿಹಾಯ್ದು, ಕಾಂಗ್ರೆಸ್ ‌ನಾಯಕರ ವಿರುದ್ದ ವಾಗ್ದಾಳಿ ಹರಿಸಿದರು.

ಶಾಸಕಿ ಭಾಗೀರಥಿ ಮುರುಳ್ಯ‌ ಮಾತನಾಡಿ ” ಬಿಜೆಪಿ ಸರಕಾರ ರಾಜ್ಯದ ರೈತರ ಕಲ್ಯಾಣಕ್ಕಾಗಿ ಉತ್ತಮ ಯೋಜನೆ ತಂದಿತ್ತು. ಇದರ ಪ್ರಯೋಜನ ಎಲ್ಲರೂ ಪಡೆಯುತ್ತಿದ್ದರು. ಆದರೆ ಇದೀಗ ಕಾಂಗ್ರೆಸ್ ಸರಕಾರ ಆ ಯೋಜನೆಯನ್ನು ರದ್ದುಗೊಳಿಸಿ ರಾಜ್ಯದ ಜನರಿಗೆ ಅನ್ಯಾಯ ಮಾಡಿದೆ ಎಂದರು.

ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಮಾತನಾಡಿ “5 ಗ್ಯಾರಂಟಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರಕಾರ ಅಭಿವೃದ್ಧಿ ಕೈ ಬಿಟ್ಟಿದೆ. ಸುಳ್ಯ ಕ್ಷೇತ್ರದಲ್ಲಿ ಒಂದೇ ಒಂದು ಕಿ.ಮೀ ರಸ್ತೆ ಮಾಡಲು ಸಾಧ್ಯವಾಗದ ಅಯೋಗ್ಯ ಸರಕಾರ ಈಗ ರಾಜ್ಯದಲ್ಲಿದೆ. ರಾಜ್ಯದ ಜನರಿಗಾಗಿ ಬಿಜೆಪಿ ಸರಕಾರ ತಂದ ಹಲವು ಜನಪರ ಯೋಜನೆಯನ್ನು ತಡೆಯುವ ಮೂಲಕ ರೈತ ವಿರೋಧಿ‌ ನೀತಿ ಅಳವಡಿಸಿದೆ. ರೈತನ ನೋವು ಆಲಿಸುವಂತ ಸಹನೆಯೂ ಅವರಿಗಿಲ್ಲ. ದಲಿತರ ಪರವಾಗಿ ಇದ್ದೇವೆ ಎಂದು ಹೇಳುವ ಸರಕಾರ ಪ.ಜಾತಿ, ಪಂಗಡದವರಿಗಾಗಿ ತೆಗೆದಿಟ್ಟ 11 ಸಾವಿರ ಕೋಟಿ ರೂವನ್ನು ಗ್ಯಾರಂಟಿಗೆ ಬಳಸಿ ಆ ಸಮಾಜಕ್ಕೂ ಅನ್ಯಾಯ ಮಾಡಿದ್ದಾರೆ ಎಂದು‌ ಹೇಳಿದರು.

ಬಿಜೆಪಿ ಮಂಡಲ‌ಸಮಿತಿ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ಮಾತನಾಡಿ “ಅಧಿಕಾರಕ್ಕೆ ಬರುವ ಮೊದಲು ರೈತರಿಗೆ ಸುಳ್ಳು ಭರವಸೆ ನೀಡಿ, ಇದೀಗ ರೈತರಿಗೆ ಮೋಸ ಮಾಡುತ್ತಿದೆ. 5 ಗ್ಯಾರಂಟಿಗೆ ನಮ್ಮ ವಿರೋಧವಿಲ್ಲ. ಅದನ್ನು ಜಾರಿಗೊಳಿಸಲು ನಮ್ಮ ಪಕ್ಷ ಆಗ್ರಹಿಸಿದ ಪರಿಣಾಮ ಒಂದಷ್ಟು‌ ಕಾರ್ಯಗಳು ಆಗಿದೆ. ಆದರೆ ನಮ್ಮ ಸರಕಾರ ತಂದ ಹಲವು ಜನಪರ ಯೋಜನೆಯಾದ ರೈತನಿಧಿ, ರೈತ ವಿದ್ಯಾರ್ಥಿ ನಿಧಿ ಹೀಗೆ ಹಲವು ಯೋಜನೆಯನ್ನು ರದ್ದು ಪಡಿಸಿರುವುದಕ್ಕೆ ನಮ್ಮ ಆಕ್ಷೇಪ ಇದೆ. ಬಿಟ್ಟಿ ಭಾಗ್ಯಗಳ ಜತೆಗೆ ಇದನ್ನು ಯಾಕೆ ತೆಗೆದುಕೊಂಡು ಹೋಗುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

ಪುತ್ತೂರು ತಾ.ಪಂ. ಮಾಜಿ ಸದಸ್ಯೆ ಪುಲಸ್ತ್ಯ ರೈ‌ ರಾಜ್ಯ ಸರಕಾರದ ನೀತಿಯನ್ನು ಖಂಡಿಸಿ ಮಾತನಾಡಿದರು.

ತಾಲೂಕು ಬಿಜೆಪಿ ಮೋರ್ಚಾ ಅಧ್ಯಕ್ಷ ರಮೇಶ್ ಕಲ್ಪುರೆ ಮಾತನಾಡಿ “ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ 100 ದಿನದಲ್ಲೇ ಪ್ರತಿಭಟನೆ ಮಾಡುವ ಸ್ಥಿತಿ ಬಂದಿದೆ. ಈಗಿನ ಸರಕಾರ ನಿರಂತರವಾಗಿ ರೈತ ವಿರೋಧಿ ನೀತಿ ಮಾಡುತ್ತಿದ್ದು ಅದರ ವಿರುದ್ಧ ನಮ್ಮ ಹೋರಾಟ ನಿರಂತರ” ಎಂದು ಹೇಳಿದರು.

ಮಹಿಳಾ ಮೋರ್ಚಾ ಅಧ್ಯಕ್ಷೆ ಶುಭದಾ ಎಸ್.ರೈ, ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಎಸ್.ಎನ್. ಮನ್ಮಥ, ಪ್ರಮುಖರಾದ ಸಂತೋಷ್ ಕುತ್ತಮೊಟ್ಟೆ, ಸುಭೋದ್ ಶೆಟ್ಟಿ ಮೇನಾಲ, ಪುಷ್ಪಾವತಿ ಬಾಳಿಲ, ವಿನಯ ಕುಮಾರ್ ಮುಳುಗಾಡು, ಶ್ಯಾಂ ಪಾನತ್ತಿಲ,ಯುವ ಮೋರ್ಚಾ ಜಿಲ್ಲಾಧ್ಯಕ್ಷ ಗುರುದತ್ ನಾಯಕ್, ಹೇಮಂತ್ ಕುಮಾರ್ ಕಂದಡ್ಕ, ಮುಗುಪ್ಪು ಕೂಸಪ್ಪ ಗೌಡ, ಜಾನವಿ ಕಾಂಚೋಡು, ಶ್ರೀನಾಥ್ ರೈ ಬಾಳಿಲ, ಬಾಲಚಂದ್ರ ದೇಚರಗುಂಡ, ಶೀನಪ್ಪ ಬಯಂಬು, ರಾಮಕೃಷ್ಣ ರೈ ಪೇರಾಲುಗುತ್ತು, ಜಯರಾಜ್ ಕುಕ್ಕೆಟ್ಟಿ, ಕರುಣಾಕರ ಹಾಸ್ಪಾರೆ, ಹರೀಶ್ ರೈ ಉಬರಡ್ಕ, ಚನಿಯ ಕಲ್ತಡ್ಕ, ಸುನಿಲ್ ಕೇರ್ಪಳ, ಪ್ರಬೋದ್ ಶೆಟ್ಟಿ‌ ಮೇನಾಲ, ಕೇಶವ ಹೊಸಗದ್ದೆ, ನಾರಾಯಣ ಬೊಮ್ಮೆಟ್ಟಿ, ಬಾಲಗೋಪಾಲ ಸೇರ್ಕಜೆ, ಬುದ್ದ ನಾಯ್ಕ್, ಶಿವಪ್ರಸಾದ್ ನಡುತೋಟ, ಕೆ.ಕೆ.ನಾಯ್ಕ್, ಚಂದ್ರಶೇಖರ ಕೇರ್ಪಳ, ಸುಪ್ರಿತ್ ಮೋಂಟಡ್ಕ, ಶಾಂತರಾಮ ಕಣಿಲೆಗುಂಡಿ, ನವೀನ್ ಕಾಯರ್ತೋಡಿ, ಕಿರಣ್ ಕುರುಂಜಿ, ಸುಧಾಕರ ಕುರುಂಜಿಭಾಗ್, ಗುರುಸ್ವಾಮಿ ಬೀರಮಂಗಲ, ಮಹೇಶ್ ರೈ ಮೇನಾಲ, ಬಾಲಕೃಷ್ಣ ಕೀಲಾಡಿ, ಕುಶಾಲಪ್ಪ ಪೆರುವಾಜೆ, ಹರ್ಷಿತ್ ಕಾರ್ಜ, ಸುಂದರ ಗೌಡ ಕಾಡುಸೊರಂಜ, ದಯಾನಂದ ಕುರುಂಜಿ, ಜಗದೀಶ್ ಸರಳಿಕುಂಜ, ಅಜಿತ್ ಕಿಲಂಗೋಡಿ, ವಿಕ್ರಂ ಅಡ್ಪಂಗಾಯ, ಪೂರ್ಣಿಮಾ ಸೂಂತೋಡು, ಶಶಿಕಲಾ ನೀರಬಿದಿರೆ, ಶೀಲಾ ಕುರುಂಜಿ, ಕಿಶೋರಿ ಶೇಟ್, ಬೂಡು ರಾಧಾಕೃಷ್ಣ ರೈ, ಪ್ರಶಾಂತ್ ಪಾನತ್ತಿಲ, ಧನಂಜಯ ಎರ್ಮೆಟ್ಟಿ, ಶ್ರೀಪತಿ ಭಟ್‌ ಮಜಿಕೋಡಿ, ವೆಂಕಟೇಶ್ ನಡುಬೆಟ್ಟು, ಶಶಿಕಲಾ ಚೂಂತಾರು, ಜಿನ್ನಪ್ಪ ಪೂಜಾರಿ, ರವಿಚಂದ್ರ ಕಾಪಿಲ, ಕೆ.ಪಿ.ಗಿರಿಧರ, ಬಾಲಚಂದ್ರ ಬಿ.ಹೆಚ್., ಅಣ್ಣಿ ಎಲ್ತಿಮಾರ್, ಕುಸುಮಾವತಿ ಮುರುಳ್ಯ, ಶಂಕರನಾರಾಯಣ ಉಪಾಧ್ಯಾಯ, ಮನುದೇವ್ ಪರಮಲೆ, ಈಶ್ವರಚಂದ್ರ ಕೆ.ಆರ್, ಶಿವರಾಮ ಕೇರ್ಪಳ, ರಾಧಾಕೃಷ್ಣ ಕೊರತ್ಯಡ್ಕ, ಚಂದ್ರಶೇಖರ ನೆಡಿಲ್, ಮಹೇಶ್ ರೈ ಮೇನಾಲ, ಶಿವನಾಥ ರಾವ್ ಹಳೆಗೇಟು, ಬಾಲಕೃಷ್ಣ ಬಾಣಜಾಲು, ಶ್ರೀಧರ ಅಡ್ಕಾರ್, ಕೆ.ಸಿ. ಹಿಮ್ಮತ್, ಸಂತೋಷ್ ಜಾಕೆ, ಅಶೋಕ್ ಪೀಚೆ, ಕು.ಜಾನಕಿ ಮುರುಳ್ಯ, ಅನೂಪ್ ಬಿಳಿಮಲೆ, ಕೃಷ್ಣಯ್ಯ ಮೂಲೆತೋಟ, ನಾರಾಯಣ ಬಂಟ್ರಬೈಲು, ವಿನುತಾ ಪಾತಿಕಲ್ಲು, ಸತ್ಯಶಾಂತಿ ತ್ಯಾಗ ಮೂರ್ತಿ, ಲಿಗೋಧರ ಆಚಾರ್ಯ, ಲೋಕೇಶ್ ಬರೆಮೇಲು, ಪ್ರೇಮಲತಾ ಕಳಂಜ ಮೊದಲಾದವರಿದ್ದರು.
ನ.ಪಂ. ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಮಹೇಶ್ ರೈ ಮೇನಾಲ‌ ವಂದಿಸಿದರು.

ಪ್ರತಿಭಟನೆಯ ಬಳಿಕ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.