ಜಾಲ್ಸೂರು: ರಸ್ತೆ ದಾಟುತ್ತಿದ್ದ ಬಾಲಕಿಗೆ ಅಂಬ್ಯುಲೆನ್ಸ್ ಢಿಕ್ಕಿ

0

ಕನಕಮಜಲಿನಲ್ಲಿ ಬೆಳಿಗ್ಗೆ ಸಂಭವಿಸಿದ ಅಪಘಾತದ ಗಾಯಾಳುವನ್ನು ಮಂಗಳೂರಿಗೆ ಬಿಟ್ಟು ಹಿಂತಿರುಗುತ್ತಿದ್ದ ಅಂಬ್ಯುಲೆನ್ಸ್

ಬಾಲಕಿ ಕಾಲಿಗೆ ಗಾಯ – ಅದೇ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು

ರಸ್ತೆ ದಾಟುತ್ತಿದ್ದ ಪ್ರೌಢಶಾಲಾ ಬಾಲಕಿಗೆ ಖಾಸಗಿ ಆಸ್ಪತ್ರೆಯ ಅಂಬ್ಯುಲೆನ್ಸ್ ಢಿಕ್ಕಿ ಹೊಡೆದು ಬಾಲಕಿಯ ಕಾಲಿಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜಾಲ್ಸೂರಿನಲ್ಲಿ ಸೆ.12ರಂದು ಸಂಜೆ ಸಂಭವಿಸಿದೆ.

ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಕನಕಮಜಲು ಗ್ರಾಮದ ಸುಣ್ಣಮೂಲೆ ನಿವಾಸಿ ನಾರಾಯಣ ಮೂಲ್ಯ ಎಂಬವರ ಪುತ್ರಿ ಯೋಗಿನಿ ಎಂಬ ಬಾಲಕಿ ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಜಾಲ್ಸೂರಿನ ಜೆ.ಕೆ. ಕಾಂಪ್ಲೆಕ್ಸ್ ಮುಂಭಾಗದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಇಂದು ಬೆಳಿಗ್ಗೆ ಕನಕಮಜಲಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ, ಹಿಂತಿರುಗಿ ಬರುತ್ತಿದ್ದ ಸುಳ್ಯದ ಖಾಸಗಿ ಆಸ್ಪತ್ರೆಯ ಅಂಬ್ಯುಲೆನ್ಸ್ ಢಿಕ್ಕಿ ಹೊಡೆದಿದ್ದು, ಬಾಲಕಿ ರಸ್ತೆಗೆ ಬಿದ್ದು ಕಾಲಿಗೆ ಗಾಯಗೊಂಡಿದ್ದು, ಅದೇ ಅಂಬ್ಯುಲೆನ್ಸ್ ಮೂಲಕ ಗಾಯಗೊಂಡ ಬಾಲಕಿಯನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದುಬಂದಿದೆ.