ಕೆ. ಎಸ್. ಗೌಡ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಕ್ಲಸ್ಟರ್ ಮಟ್ಟದ ಹಿರಿಯರ ಮತ್ತು ಕಿರಿಯರ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಸಮಗ್ರ ಪ್ರಶಸ್ತಿ

0

ಸೆ. 12ರಂದು ಪಂಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಕಿರಿಯ ಮತ್ತು ಹಿರಿಯರ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಎರಡೂ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಕಿರಿಯರ ವಿಭಾಗದ ಕ್ಲೇ ಮಾಡೆಲಿಂಗ್ ಸ್ಪರ್ಧೆಯಲ್ಲಿ ಧನುಷ್.ಕೆ – ೩ನೇ ತರಗತಿ ಪ್ರಥಮ, ಇಂಗ್ಲೀಷ್ ಕಂಠಪಾಠ ಸ್ಪರ್ಧೆಯಲ್ಲಿ ಜಶ್ಮಿ. ಪಿ – ೪ನೇ ತರಗತಿ ಪ್ರಥಮ, ಲಘು ಸಂಗೀತ ಸ್ಪರ್ಧೆ ಹಾಗೂ ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ಪ್ರಣತಿ. ಎನ್ – ೩ನೇ ತರಗತಿ ಪ್ರಥಮ, ಲಘು ಸಂಗೀತ ಸ್ಪರ್ಧೆಯಲ್ಲಿ ಗಾನವಿ. ವಿ. ರೈ – ೩ನೇ ತರಗತಿ ದ್ವಿತೀಯ, ಆಶುಭಾಷಣ ಸ್ಪರ್ಧೆಯಲ್ಲಿ ಕೃತಿಕಾ – ೪ನೇ ತರಗತಿ ದ್ವಿತೀಯ, ಚಿತ್ರಕಲಾ ಸ್ಪರ್ಧೆಯಲ್ಲಿ ಶಿಶಿರ್. ಎ – ೩ನೇ ತರಗತಿ ತೃತೀಯ ಹಾಗೂ ಛದ್ಮವೇಷ ಸ್ಪರ್ಧೆಯಲ್ಲಿ ಗಮನ್ವಿ – ೩ನೇ ತರಗತಿ ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ.

ಹಿರಿಯರ ವಿಭಾಗದಲ್ಲಿ ಹಿಂದಿ ಕಂಠಪಾಠ ಸ್ಪರ್ಧೆಯಲ್ಲಿ ದಿಗಂತ್. ಪಿ – ೭ನೇ ತರಗತಿ ಪ್ರಥಮ, ಕನ್ನಡ ಕಂಠಪಾಠದಲ್ಲಿ ಅಪ್ಸಾದ್ – ೭ನೇ ತರಗತಿ ಪ್ರಥಮ, ಭಕ್ತಿಗೀತೆ ವಿಭಾಗದಲ್ಲಿ ಕ್ಷಮಾ. ಕೆ. ಪಿ – ೭ನೇ ತರಗತಿ ಪ್ರಥಮ, ಅಭಿನಯ ಗೀತೆ ವಿಭಾಗದಲ್ಲಿ ಶೀರ್ಷಿತಾ – ೫ನೇ ತರಗತಿ ದ್ವಿತೀಯ, ಛದ್ಮವೇಷ ಸ್ಪರ್ಧೆಯಲ್ಲಿ ತೃಷಾ – ೩ನೇ ತರಗತಿ ತೃತೀಯ, ಲಘು ಸಂಗೀತ ಸ್ಪರ್ಧೆಯಲ್ಲಿ ಕ್ಷಮಾ. ಕೆ. ಪಿ – ೭ನೇ ತರಗತಿ ತೃತೀಯ, ಧಾರ್ಮಿಕ ಪಠಣ ( ಅರೇಬಿಕ್ ) ವಿಭಾಗದಲ್ಲಿ ಅಹಮ್ಮದ್ ಮನಾಝ್ – ೫ನೇ ತರಗತಿ ದ್ವಿತೀಯ, ಇಂಗ್ಲೀಷ್ ಕಂಠಪಾಠ ಸ್ಪರ್ಧೆಯಲ್ಲಿ ಪೃಥ್ವಿ.ಎಂ – ೭ನೇ ತರಗತಿ ತೃತೀಯ ಬಹುಮಾನವನ್ನು ಪಡೆದಿರುತ್ತಾರೆ.

ಸರ್ಕಾರಿ ಪದವಿ ಪೂರ್ವ ಕಾಲೇಜು, ಪಂಜ ಇಲ್ಲಿ ನಡೆದ ಪ್ರೌಢಶಾಲಾ ವಿಭಾಗದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ನೇಹಾ. ಬಿ – ೧೦ನೇ ತರಗತಿ ಪ್ರಥಮ, ಭರತನಾಟ್ಯದಲ್ಲಿ ಸ್ತುತಿ. ರೈ – ೧೦ನೇ ತರಗತಿ ಪ್ರಥಮ, ಚೈತಾಲಿ.ಕೆ – ೮ನೇ ತರಗತಿ ಛದ್ಮವೇಷ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ಸಂಗೀತ ಸ್ಪರ್ಧೆಯಲ್ಲಿ ಮಹತಿ. ಎನ್. ೮ನೇ ತರಗತಿ ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ.