ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇದರ ಸುವರ್ಣ ಮಹೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಶಾಲೆಯ ಸಂಚಾಲಕ ರಾಧಾಕೃಷ್ಣ ಬೊಳ್ಳೂರು ರವರ ಅಧ್ಯಕ್ಷತೆಯಲ್ಲಿ ಇಂದು (ಸೆ.13) ನಡೆಯಿತು.
ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯ
ಪ್ರಾಥಮಿಕ ವಿಭಾಗದಲ್ಲಿ ಸಾಮೂಹಿಕದೇಶಭಕ್ತಿಗೀತೆ ಗಾಯನಸ್ಪರ್ಧೆಯಲ್ಲಿ
ಪ್ರಥಮ -ರೋಟರಿ ಆಂಗ್ಲ ಮಾಧ್ಯಮ ಶಾಲೆ ಸುಳ್ಯ, ದ್ವಿತೀಯ -ವಿವೇಕಾನಂದ ಪ್ರಾಥಮಿಕ ಶಾಲೆ ವಿನೋಬನಗರ ಅಡ್ಕಾರ್ ಪಡೆದುಕೊಂಡಿತು.
ಪ್ರಾಥಮಿಕ ವಿಭಾಗದ ಛದ್ಮವೇಷ ಸ್ಪರ್ಧೆಯಲ್ಲಿ
ಪ್ರಥಮ -ಪೂರ್ವಿಕ್
ಸ. ಉ. ಹಿ. ಪ್ರಾ. ಶಾಲೆ ಬಳ್ಪ,ದ್ವಿತೀಯ –
ಸಾತ್ವಿಕ್ ಎಂ ಸ. ಹಿ. ಪ್ರಾ. ಶಾಲೆ ಕುಕ್ಕುಜಡ್ಕ,
ತೃತೀಯ-ಜಶ್ವಿತಾ ಬಿ. ಎಸ್, ಸ ಹಿ. ಪ್ರಾ. ಶಾಲೆ ಶೇಣಿ,ಪ್ರೌಢಶಾಲೆ ವಿಭಾಗದ ಜಾನಪದ ನೃತ್ಯ ಸ್ಪರ್ಧೆಯಲ್ಲಿ
ಪ್ರಥಮ -ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ,
ದ್ವಿತೀಯ-ಸ.ಪದವಿಪೂರ್ವಕಾಲೇಜು(ಪ್ರೌಢಶಾಲಾ ವಿಭಾಗ) ಸುಳ್ಯ,
ತೃತೀಯ -ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ,
ಪ್ರೌಢಶಾಲೆ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ
ಪ್ರಥಮ-ಸ. ಪ್ರೌಢಶಾಲೆ ಮರ್ಕಂಜ,ದ್ವಿತೀಯ- ವಿವೇಕಾನಂದ ಪ್ರೌಢಶಾಲೆ ವಿನೋಬನಗರ ಅಡ್ಕಾರ್ ಪಡೆದುಕೊಂಡರು.
ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನವನ್ನು ವಿಜೇತ ವಿದ್ಯಾರ್ಥಿಗಳಿಗೆ ನೀಡಲಾಯಿತು. ವೇದಿಕೆಯಲ್ಲಿ ಸಮಿತಿಯ ಪದಾಧಿಕಾರಿಗಳು ಹಾಗೂ ಅದ್ಯಾಪಕ ವೃಂದದವರು ಉಪಸ್ಥಿತರಿದ್ದರು.