ವಿಕಲಚೇತನರ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಆದೇಶದಂತೆ ದೀಪಶ್ರೀ ಎಂಬ ಹೆಸರಿನ ವಿಕಲ ಚೇತನರ ಸ್ವಸಹಾಯ ಸಂಘ, ಮತ್ತು ಚೈತನ್ಯ ಎಂಬ ಆರೈಕೆದಾರರ ಸಂಘವನ್ನು ಮಾಡಲಾಯಿತು.
ಸಭೆಯಲ್ಲಿ ನಗರ ಪಂಚಾಯತ್ ನ ಮುಖ್ಯಾಧಿಕಾರಿ ಸುಧಾಕರ್, ತಾಲ್ಲೂಕು ಪಂಚಾಯತ್ ನ ವಿಕಲಚೇತನ ಇಲಾಖೆಯ ಎಮ್.ಆರ್.ಡಬ್ಲ್ಯೂ ಚಂದ್ರಶೇಖರ್, ನಗರ ಪಂಚಾಯತ್ ನ ಸಮುದಾಯ, ಸಂಘಟನಾಧಿಕಾರಿ ಜಯಲಕ್ಷ್ಮಿ ನಗರ ಪಂಚಾಯತ್ ನ ವಿಕಲಚೇತನ ಇಲಾಖೆಯ
ಯು. ಆರ್. ಡಬ್ಲ್ಯೂ ಪ್ರವೀಣ್ ನಾಯಕ್ ಮತ್ತು ಹಲವಾರು ಜನ ವಿಕಲಚೇತನರು ಭಾಗವಹಿಸಿದ್ದರು