ಸುಬ್ರಹ್ಮಣ್ಯದಲ್ಲಿ ನೂತನವಾಗಿ ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ (ರೀ) ಅಸ್ತಿತ್ವಕ್ಕೆ ಬಂದು ಇಂದು ಉದ್ಘಾಟನೆಗೊಂಡಿತು.
ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ l ಎ.ಎ.ತಿಲಕ್ ಮಾತನಾಡುತ್ತಾ, “ನಮ್ಮ ಟ್ರಸ್ಟ್ ತೀರಾ ಬಡತನದಲ್ಲಿ ಜೀವನ ನಡೆಸುತ್ತಿರುವ ಪೋಷಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವುದು, ಅನಾರೋಗ್ಯ ಸ್ಥಿತಿಯಲ್ಲಿದ್ದ ಬಡವರಿಗೆ ನೆರವು ನೀಡುವುದು, ಅಶಕ್ತ ಜನರ ಒಳಿತಿಗೆ ನೆರವು, ನಿರ್ಗತಕರಿಗೆ ನೆರವು, ಅಪಘಾತದಲ್ಲಿ ಆರ್ಥಿಕ ಸಮಸ್ಯೆ ಉಂಟಾದಾಗ ನೆರವು, ಹಾಗೂ ನಿರ್ಗತಿಕರಿಗೆ ತನ್ನಿಂದ ಆದಷ್ಟು ನೆರವನ್ನ ನೀಡುತ್ತಾ ಬರುವುದೇ ನಮ್ಮ ಮುಖ್ಯ ಉದ್ದೇಶ” ಎಂದು ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ಸುಬ್ರಹ್ಮಣ್ಯದ ನೂಚಿಲ ನಿವಾಸಿ ನಾರಾಯಣ ದಂಪತಿಯ ಮಗಳು ವರ್ಷಳಿಗೆ ಪಿಯುಸಿಯಲ್ಲಿ ಶೇಕಡ 93 ಅಂಕ ತೆಗೆದು ಮುಂದಿನ ಇಂಜಿನಿಯರಿಂಗ್ ವ್ಯಾಸಂಗಕ್ಕಾಗಿ ಸಹಾಯಧನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷೆ ಶ್ರೀಮತಿ ಗಾಯತ್ರಿ ತಿಲಕ್, ಕೋಶಾಧಿಕಾರಿ ದಿನೇಶ್ ಎಂ ಪಿ, ನಿರ್ದೇಶಕರುಗಳಾದ ಭಾರತಿ ದಿನೇಶ್, ಹಾಗೂ ರೋಹಿತ್ ಬಿ.ಬಿ ಉಪಸ್ಥಿತರಿದ್ದರು. ಟ್ರಸ್ಟಿನ ನಿರ್ದೇಶಕಿ ಭಾರತೀ ದಿನೇಶ್ ಸ್ವಾಗತಿಸಿದರು. ಕೋಶಾಧಿಕಾರಿ ದಿನೇಶ್ ಎಂ.ಪಿ. ಧನ್ಯವಾದ ಸಮರ್ಪಿಸಿದರು.