ಕಲ್ಲಪಣೆ ರಾಮ ಬೈರರವರಿಗೆ ಮನೆ ನಿರ್ಮಾಣಕ್ಕೆ ಸ್ಪಂದಿಸಿದ ಬೆಳ್ಳಾರೆ ರೋಟರಿ ಕ್ಲಬ್

0

ಮನೆ ನಿರ್ಮಾಣಕ್ಕೆ ಜೆಸಿಬಿ ಮೂಲಕ ಭೂಮಿ ಸಮತಟ್ಟು

ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಕೊಡಿಯಾಲ ಗ್ರಾಮದ ಕಲ್ಲಪಣೆ ಯಲ್ಲಿ ಟರ್ಪಾಲ್ ಹೊದಿಸಿದ ಮುರುಕಲು ಮನೆಯಲ್ಲಿ ಮೂರು ಜೀವಗಳು ಎನ್ನುವ ವರದಿ ಪ್ರಕಟಗೊಂಡಿದ್ದು ಈ ವರದಿಗೆ ಬೆಳ್ಳಾರೆ ರೋಟರಿ ಕ್ಲಬ್ ಸ್ಪಂದಿಸಿದೆ.


ರೋಟರಿ ಕ್ಲಬ್ ಬೆಳ್ಳಾರೆ ವತಿಯಿಂದ ಕೊಡಿಯಾಲ ಗ್ರಾಮದ ಕಲ್ಲಪ್ಪಣೆಯ ರಾಮಬೈರ ಎಂಬವರ ಮುರುಕಲು ಮನೆಯ ಪುನರ್ ನಿರ್ಮಾಣದ ಕಾರ್ಯಕ್ಕೆ ಜೆಸಿಬಿ ಮೂಲಕ ಭೂಮಿ ಸಮತಟ್ಟು ಮಾಡುವ ಕೆಲಸ ನಡೆಯಿತು.


ಇದರ ಪ್ರಾಯೋಜಕತ್ವವನ್ನು ಝೋನಲ್ ಲೆಫ್ಟಿನೆಂಟ್ ರೋ. ಪದ್ಮನಾಭ ಬೀಡು ಶ್ರೀ ಜಲದುರ್ಗಾ ದೇವಿ ಪ್ರಸನ್ನ ಅರ್ಥ್ ಮೂವರ್ಸ್ ಆ್ಯಂಡ್ ಟ್ರಾನ್ಸ್ ಫೋರ್ಟ್ ಆ್ಯಂಡ್ ಬೋರ್ ವೆಲ್ಸ್ ಇವರು ವಹಿಸಿ ಕೊಂಡು ಭೂಮಿ ಸಮತಟ್ಟು ಮಾಡಿರುತ್ತಾರೆ.


ಮನೆ ನಿರ್ಮಾಣವಾದ ಬಳಿಕ ಮನೆಯ ವಿದ್ಯುತ್ ವಯರಿಂಗ್ ಕೆಲಸವನ್ನು ರತ್ನ ಇಲೆಕ್ಟಿಕಲ್ಸ್ ನ ಪ್ರಮೋದ್ ಶೆಟ್ಟಿ ಕುಂಟುಪುಣಿಗುತ್ತು ಇವರು ಉಚಿತವಾಗಿ ನಿರ್ವಹಿಸಿ ಕೊಡುವುದಾಗಿ ವಾಗ್ದಾನ ನೀಡಿರುತ್ತಾರೆ.


ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಶಶಿಧರ ಬಿ.ಕೆ,ರೋ.ಎ.ಕೆ.ಮಣಿಯಾಣಿ, ರೋ.ಪದ್ಮನಾಭ ಬೀಡು,ರೋ.ಪ್ರಮೋದ್ ಶೆಟ್ಟಿ ಕುಂಟುಪುಣಿಗುತ್ತು, ರೋ.ವಿನಯ ಕುಮಾರ್,ರೊ.ಬಾಲಕೃಷ್ಣ ಮಡ್ತಿಲ, ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷನ್ ಕೆ.ಟಿ, ಪಿ.ಡಿ.ಒ ಜಯಂತ್ ಉಪಸ್ಥಿತರಿದ್ದರು.