ಪಂಬೆತ್ತಾಡಿ ಪ್ರಾ.ಕೃ.ಪ.ಸ.ಸಂಘದ ಮಹಾಸಭೆ80.67 ಕೋಟಿ ವ್ಯವಹಾರ, ಶೇ. 6.5 ಡಿವಿಡೆಂಟ್

0

ಪಂಬೆತ್ತಾಡಿ ಪ್ರಾ.ಕೃ.ಪ.ಸ. ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಸೆ. 16ರಂದು ಸಂಘದ ವಠಾರದಲ್ಲಿ ಸಂಘದ ಅಧ್ಯಕ್ಷ ಜಾಕೆ ಮಾಧವ ಗೌಡರ ಅಧ್ಯಕ್ಷತೆಯಲ್ಲಿ ನಡೆಯಿತು.


ಅಧ್ಯಕ್ಷ ಜಾಕೆ ಮಾಧವ ಗೌಡರು ಸ್ವಾಗತಿಸಿದ ಬಳಿಕ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪುರುಷೋತ್ತಮ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ವರದಿ ಸಾಲಿನಲ್ಲಿ ಸಂಘ ರೂ. 80.67 ಕೋಟಿ ವ್ಯವಹಾರ ನಡೆಸಿ ಸದಸ್ಯರಿಗೆ ಶೇ. 6.5 ಡಿವಿಡೆಂಟ್ ನೀಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಆಯುಷ್ಮಾನ್ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಕಲ್ಮಡ್ಕ ಗ್ರಾಮ ಪಂಚಾಯತ್ ಮತ್ತು ಆರೋಗ್ಯ ಉಪಕೇಂದ್ರ ಪಂಬೆತ್ತಾಡಿ ಇದರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಈ ಸಂದರ್ಭದಲ್ಲಿ ನಡೆಸಲಾಯಿತು. ಪರಿವಾರ ಪಂಜ ರೈತ ಉತ್ಪಾದಕ ಕಂಪನಿ ಲಿ. ಇದರ ವತಿಯಿಂದ ಸಂಘದ ಸದಸ್ಯರಿಗೆ ಮಣ್ಣು ಪರೀಕ್ಷೆಯ ಕಾರ್ಯಾಗಾರ ನಡೆಸಲಾಯಿತು. ಸಂಘದ ಉಪಾಧ್ಯಕ್ಷ ಕುಲ್ದೀಪ್ ಎಸ್, ನಿರ್ದೇಶಕರಾದ ಮಹೇಶ್ ಕುಮಾರ್ ಕೆ.ಎಸ್, ಜಯರಾಮ ಬಿ, ಗಣೇಶ್ ಪ್ರಸಾದ್ ಬಿ, ಶ್ರೀನಿವಾಸ ಬಿ.ಎಸ್, ಜಿ ಧರ್ಮಣ್ಣ ನಾಯ್ಕ್, ರೋಹಿತಾಶ್ವ ಚೀಮುಳ್ಳು, ವೆಂಕಪ್ಪ ಎನ್.ಪಿ, ಮೂಕಾಂಬಿಕಾ ಬಿ, ಭಾಗೀರಥಿ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಲ್ದೀಪ್ ಸುತ್ತುಕೋಟೆ ವಂದಿಸಿದರು. ಸಂಘದ ಸಿಬ್ಬಂದಿ ವರ್ಗ ಸಹಕಾರ ನೀಡಿದರು.