ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಭಾರತ ಸರಕಾರ ಸೇವೆ ಅಭಿಯಾನದ ಅಂಗವಾಗಿ ಸ್ವಚ್ಛತೆಯ ಕುರಿತಾದ ಮಾಹಿತಿ ಮತ್ತು ಪ್ರಮಾಣ ವಚನ ಕಾರ್ಯಕ್ರಮ ಸೆ. 15 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಸ್ವಚ್ಛತೆ ಕುರಿತಾಗಿ ಮಾಹಿತಿ ನೀಡಿದ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಎರಡರ ಯೋಜನಾಧಿಕಾರಿ ಸಂಜೀವ ಕೆ. ವಿದ್ಯಾರ್ಥಿಗಳಿಗೆ ಪ್ರಮಾಣ ವಚನವನ್ನು ಭೋದಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಮ್.ಎಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾರ್ಗದರ್ಶನ ನೀಡಿದರು. ಘಟಕಾಧಿಕಾರಿ ಶ್ರೀಮತಿ ಚಿತ್ರಲೇಖಾ ಕೆ.ಎಸ್ ಸ್ವಾಗತಿಸಿ, ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿ ಸುಶ್ಮಿತಾ ವಂದಿಸಿದರು. ದ್ವಿತೀಯ ಕಲಾಪದವಿ ವಿಭಾಗದ ಪ್ರಸಾದ್ ಮತ್ತು ಸಂಜಯ ಕಾರ್ಯಕ್ರಮ ನಿರೂಪಿಸಿದರು.