ಕೊಡಿಯಾಲ : ರಾಮ ಬೈರರವರಿಗೆ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ

0

ಕೊಡಿಯಾಲ ಗ್ರಾಮದ ಕಲ್ಪಣೆ ರಾಮಬೈರರವರಿಗೆ ಮನೆ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ಸೆ.16 ರಂದು ನಡೆಯಿತು.
ಶಿವರಾಮ ಶಾಸ್ತ್ರಿಯವರು ಭೂಮಿ ಪೂಜೆ ನೆರವೇರಿಸಿದರು.
ಮುರುಕಲು ಮನೆಯಲ್ಲಿ ವಾಸವಿದ್ದ ರಾಮಬೈರ ಮತ್ತು ಮನೆಯವರಿಗೆ ಸತ್ಯಸಾಯಿ ಭಕ್ತರು ಸತ್ಯಸಾಯಿ ಭಜನಾ ಮಂಡಳಿ ಸದಸ್ಯರ ಸಹಕಾರ ಪಡೆದು ,ಸರಕಾರದ ಅನುದಾನ ಹಾಗೂ ಸ್ಥಳೀಯ ದಾನಿಗಳ ನೆರವಿನೊಂದಿಗೆ ವಾಸಯೋಗ್ಯ ಮನೆ ನಿರ್ಮಿಸಿಕೊಡಲು ಮುಂದೆ ಬಂದಿದ್ದು ಭೂಮಿ ಪೂಜೆ ನೆರವೇರಿಸಲಾಯಿತು.


ಈ ಸಂದರ್ಭದಲ್ಲಿ ಡಾ.ಸಾಯಿಗೀತಾ ಹಾಗೂ ಡಾ.ಎನ್.ಎ.ಜ್ಞಾನೇಶ್ , ಕೊಡಿಯಾಲ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಚಿತ್ರಾ,ಸದಸ್ಯರಾದ ಕರುಣಾಕರ ಆಳ್ವ, ಹಾಗೂ ತೇಜ್ ಪ್ರಕಾಶ್ ಬುಡ್ಲೆಗುತ್ತು, ಸಾಯಿಗಿರಿಧರ್ , ಕೆ.ಕೆ.ನಾಯ್ಕ್ ಕೊಡಿಯಾಲ ಮತ್ತು ರಾಮಬೈರರವರ ಮನೆಯವರು ಉಪಸ್ಥಿತರಿದ್ದರು.