ಐವರ್ನಾಡು : ರೈತ ಉತ್ಪಾದಕ ಸಂಸ್ಥೆಯ ರೈತ ಆಸಕ್ತ ಗುಂಪುಗಳ ಸಭೆ

0

ರೈತ ಉತ್ಪಾದಕ ಸಂಸ್ಥೆಯ ಐವರ್ನಾಡು ಗ್ರಾಮದ ರೈತ ಆಸಕ್ತ ಗುಂಪುಗಳ ಸಭೆಯು ಸೆ.15 ರಂದು ಐವರ್ನಾಡು ಪ್ರಾ.ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಜರುಗಿತು.ಸಂಸ್ಥೆಯ ಅಧ್ಯಕ್ಷರಾದ ವೀರಪ್ಪಗೌಡ ಕಣ್ಕಲ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಎಸ್.ಎನ್ .ಮನ್ಮಥರವರು ಮುಖ್ಯ ಅತಿಥಿಯಾಗಿದ್ದರು. ಸಂಸ್ಥೆಯ ನಿರ್ದೇಶಕರಾದ ನೂಜಾಲು ಪದ್ಮನಾಭ ಗೌಡ, ಸಿ ಇ ಒ.ಹರೀಶ್ ಬಿ.ಕೆ, ರೈತ ಆಸಕ್ತ ಗುಂಪಿನ 10 ಜನ ಮುಖ್ಯಸ್ಥರು ಮತ್ತು 75ಕ್ಕೂ ಮಿಕ್ಕಿ ಶೇರುದಾರರು ಭಾಗವಹಿಸಿದ್ದರು.


ಸಂಸ್ಥೆಯ ಎಲ್ಲಾ ರೀತಿಯ ಕಾರ್ಯ ಚಟುವಟಿಕೆಗಳು, ಆರ್ಥಿಕ ಪುರಗಾಮಿ ಬೆಳವಣಿಗೆಗಳು, ದೂರದೃಷ್ಟಿಯ ಯೋಜನೆಗಳು ರೈತ ಸದಸ್ಯರಿಗೆ ಒದಗಿಸುತ್ತಿರುವ ಸೇವಾ ಕಾರ್ಯಗಳು, ಆಡಳಿತ ಮಂಡಳಿ, ಹಾಗೂ ಸದಸ್ಯರ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಲಾಯಿತು.
ಸದಸ್ಯರಿಗೆ ತಮ್ಮ ಪಾಲು ಬಂಡವಾಳ, ಸರಕಾರದ ಕಡೆಯಿಂದ ಕೊಡಲ್ಪಟ್ಟ ಈಕ್ವಿಟಿ ಪಾಲು ಬಂಡವಾಳದ ಸರ್ಟಿಫಿಕೇಟ್ ಗಳನ್ನು ವಿತರಿಸಲಾಯಿತು.
ಅಧ್ಯಕ್ಷರಾದ ವೀರಪ್ಪಗೌಡ ಕಣ್ಕಲ್ ಅವರು ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಎಲ್ಲಾ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು.ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಎಸ್.ಎನ್. ಮನ್ಮಥ ಅವರು ಸಂಸ್ಥೆಗೆ ಶುಭ ಹಾರೈಸಿದರು.

ನಿರ್ದೇಶಕರಾದ ನೂಜಾಲು ಪದ್ಮನಾಭ ಗೌಡರು ಪ್ರಾಸ್ತಾವಿಕವಾಗಿಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಆಸಕ್ತ ಗುಂಪಿನ ಮುಖ್ಯಸ್ಥರಾದ ಜಯಪ್ರಕಾಶ್ ನೆಕ್ರೆಪ್ಪಾಡಿ ವಂದನಾರ್ಪಣೆಗೈದರು.
ಭರತ್ ಕೊಂಪುಳಿ ಕಾರ್ಯಕ್ರಮ ನಿರೂಪಿಸಿದರು.